ನವದೆಹಲಿ: ಲಿಬರೇಶನ್ ಟೈಗರ್ಸ್ ಆಫ್ ತಮಿಳುನಾಡು (LTTE) ಮೇಲಿನ ನಿಷೇಧವನ್ನು ಭಾರತ ಸರ್ಕಾರ ಮತ್ತೆ ಐದು ವರ್ಷಗಳ ಕಾಲ ವಿಸ್ತರಣೆ ಮಾಡಿದೆ. ಕಾನೂನುಬಾಹಿರ ಚಟುವಟಿಕೆ (ನಿರ್ಬಂಧ) ಕಾಯ್ದೆ, 1967 (1967ರ 37)ನ ಸಬ್ ಸೆಕ್ಷನ್ (1) ಮತ್ತು (3)ರ ಅಡಿಯಲ್ಲಿ ತಕ್ಷಣ ಜಾರಿಗೆ ಬರುವಂತೆ ನಿಷೇಧವನ್ನು ಮುಂದುವರೆಸಲಾಗಿದೆ.
‘LTTE ಶ್ರೀಲಂಕಾ ಮೂಲದ ಸಂಸ್ಥೆಯಾಗಿದೆ, ಆದರೆ ಇದು ಭಾರತದಲ್ಲಿ ಬೆಂಬಲಿಗರನ್ನು, ಅನುಕಂಪದಾರರನ್ನು ಮತ್ತು ಏಜೆಂಟ್ಸ್ಗಳನ್ನು ಹೊಂದಿದೆ. ಶ್ರೀಲಂಕಾದಲ್ಲಿ ತಮಿಳರಿಗಾಗಿ ತಮಿಳು ಏಲಂ ಎಂಬ ಪ್ರತ್ಯೇಕ ರಾಷ್ಟ್ರ ಸ್ಥಾಪನೆ ಮಾಡಬೇಕು ಎಂಬುದು ಅವರ ಒತ್ತಾಯವಾಗಿತ್ತು. ಮಾಜಿ ಪ್ರಧಾನಿ ರಾಜೀವ್ ಗಾಂಧೀ ಹತ್ಯೆಯ ಬಳಿಕ ಈ ಸಂಘಟನೆಯ ಕುಸಿತ ಆರಂಭಗೊಂಡಿತು.
“LTTE ಈಗಲೂ ಹಿಂಸಾತ್ಮಕವಾಗಿಯೇ ಇದೆ ಮತ್ತು ಅಕ್ರಮ ಚಟುವಟಿಕೆಯಲ್ಲಿ ತೊಡಗಿದೆ. ಭಾರತದ ಸಾರ್ವಭೌಮತೆ, ಸಮಗ್ರತೆ ಈ ಸಂಘಟನೆ ಮಾರಕವಾಗಿದೆ. ಭಾರತ ವಿರೋಧಿ ಧೋರಣೆಯನ್ನು ಅದು ಬಲವಾಗಿ ಹೊಂದಿದ್ದು, ರಾಷ್ಟ್ರೀಯ ಭದ್ರತೆಗೆ ಮಾರಕವಾಗಿದೆ” ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
1991ರಲ್ಲಿ ರಾಜೀವ್ ಗಾಂಧೀ ಅವರ ಹತ್ಯೆಯ ಬಳಿಕ LTTEಯನ್ನು ಭಾರತದಲ್ಲಿ ನಿಷೇಧ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.