ನವದೆಹಲಿ: ಭಾರತೀಯ ಸೇನೆಯು ಶೀಘ್ರದಲ್ಲೇ ಹೊಸ ಸಮವಸ್ತ್ರಗಳನ್ನು ಹೊಂದಲಿದೆ. ಆಯಾ ಪ್ರದೇಶಗಳ ಹವಮಾನಕ್ಕೆ ತಕ್ಕುದಾದ ಸಮವಸ್ತ್ರಗಳನ್ನು ಯೋಧರಿಗೆ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ಇರುವ ಸಮವಸ್ತ್ರಕ್ಕಿಂತ ಇದು ಸಂಪೂರ್ಣ ವಿಭಿನ್ನವಾಗಿರಲಿದೆ. ರಕ್ಷಣಾ ಸಚಿವಾಲಯದ ಉನ್ನತ ಮಟ್ಟದ ಮೂಲಗಳು ಈ ವಿಷಯವನ್ನು ಸ್ಪಷ್ಟಪಡಿಸಿವೆ.
ಹೊಸ ಸಮವಸ್ತ್ರ ತಯಾರಿಸುವ ಸಲುವಾಗಿ ವಿಶ್ವದ ವಿವಿಧ ದೇಶಗಳ ಸೇನೆಗಳ ಸಮವಸ್ತ್ರ, ಅವುಗಳ ಉಪಯೋಗ ಮತ್ತು ಪ್ರಾಯೋಗಿಕತೆಯನ್ನು ಅಧ್ಯಯನವನ್ನು ನಡೆಸಲಾಗುತ್ತಿದೆ. ಭಾರತೀಯ ಹವಾಗುಣಕ್ಕೆ ಅನ್ವಯವಾಗುವಂತೆ ಸಮವಸ್ತ್ರವನ್ನು ತಯಾರು ಮಾಡಲಾಗುತ್ತದೆ. ಆಯಾ ಭಾಗಗಳಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಆಯಾ ಭಾಗಗಳ ಹವಾಗುಣವನ್ನು ಸಹಿಸಲು ಸಾಧ್ಯವಾಗುವಂತಹ ಸಮವಸ್ತ್ರ ತಯಾರು ಮಾಡಲಾಗುತ್ತದೆ.
ಪ್ರಸ್ತುತ ನಮ್ಮ ಸೈನಿಕರು ತೊಡುತ್ತಿರುವ ಯೂನಿಫಾರ್ಮ್ ಸೆಖೆಗೆ ಹೊಂದುವುದಿಲ್ಲ. ವಿಪರೀತ ಬಿಸಿಲಿನಲ್ಲಿ ಸೈನಿಕರು ತುಂಬಾ ಕಷ್ಟಪಟ್ಟು ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ. ಚಳಿಗೆ ಮಾತ್ರವೇ ಅನುಕೂಲವಾಗುವಂಥ ಟೆರಿಕೋಟ್ ಫೈಬರ್ನ ಈ ಯೂನಿಫಾರ್ಮ್ ಅನ್ನು ಬದಲಿಸಿ ಆಯಾ ಪ್ರದೇಶದ ಹವಾಗುಣಕ್ಕೆ ಹೊಂದಿಕೆಯಾಗುವಂಥ ಯೂನಿಫಾರ್ಮ್ ನೀಡಲಾಗುವುದು.
ಮಾತ್ರವಲ್ಲದೇ, ಸೈನಿಕರ ಬೆಲ್ಟನ್ನು ಕೂಡ ಬದಲಾಯಿಸಲು ನಿರ್ಧರಿಸಲಾಗಿದೆ. ಹೊಸ ವಿನ್ಯಾಸದ ಬೆಲ್ಟ್, ಭುಜದ ಮೇಲಿನ ಶ್ರೇಯಾಂಕಗಳ ಸ್ಥಾನ, ಹೀಗೆ ಹೆಚ್ಚು ಆರಾಮದಾಯಕ ಹಾಗೂ ಆಕರ್ಷಕವಾಗಿಸುವ ಸಲುವಾಗಿ ಭಾರತೀಯ ಸೈನಿಕರ ಸಮವಸ್ತ್ರದ ಮೇಕ್ಓವರ್ ಶೀಘ್ರದಲ್ಲೇ ಆಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.