ನವದೆಹಲಿ: ಬ್ರಿಟಿಷ್ ಇಂಟರ್ನ್ಯಾಷನಲ್ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ ಸ್ಟ್ಯಾಂಡರ್ಡ್ ಚಾರ್ಟೆಡ್ ಪಿಎಲ್ಸಿಯ ವರದಿಯ ಪ್ರಕಾರ, 2020ರ ವೇಳೆಗೆ ಜಾಗತಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಲಿದೆ. ಭಾರತ, ಬಾಂಗ್ಲಾದೇಶ, ವಿಯೆಟ್ನಾಂ, ಮಯನ್ಮಾರ್ ಮತ್ತು ಫಿಲಿಪೈನ್ಸ್ ದೇಶಗಳು ಮುಂದಿನ 10 ವರ್ಷಗಳಲ್ಲಿ ಶೇ. 7ರಷ್ಟು ಪ್ರಗತಿ ಹೊಂದುವ ಏಷ್ಯಾದ ರಾಷ್ಟ್ರಗಳಾಗಿವೆ. ಕಳೆದ ನಾಲ್ಕು ದಶಕಗಳಿಂದ ಈ ಸಾಲಿನಲ್ಲಿರುವ ಚೀನಾ ಪಟ್ಟಿಯಿಂದ ಹೊರೆಗುಳಿಯುವ ಸಾಧ್ಯತೆ ಇದೆ. ಮುಂದಿನ ಒಂದು ದಶಕದಲ್ಲಿ ಅದರ ಪ್ರಗತಿ ದರ ಶೇ .5.5ಕ್ಕೆ ಇಳಿಯುವ ಸಾಧ್ಯತೆ ಇದೆ.
ಬ್ರಿಟಿಷ್ ಇಂಟರ್ನ್ಯಾಷನಲ್ 2010ರಲ್ಲಿ ಮೊದಲ ಬಾರಿಗೆ 7% ಗ್ರೋಥ್ ಲಿಸ್ಟ್ ಅನ್ನು ಪ್ರಕಟಗೊಳಿಸಿತ್ತು. ಚೀನಾ, ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ವಿಯೆಟ್ನಾಂ, ನೈಜೀರಿಯಾ, ಇಥಿಯೋಪಿಯಾ, ತಾಂಝೇನಿಯಾ, ಉಗಾಂಡ ಮತ್ತು ಮೊಜಾಂಬಿಕ್ ದೇಶಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದವು.
ಈ ಹಿಂದೆ ಬ್ರಿಟಿಷ್ ಇಂಟರ್ನ್ಯಾಷನಲ್, 2030ರ ವೇಳೆಗೆ ಭಾರತವು ವಿಶ್ವದ ಎರಡನೇ ಅತೀದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿತ್ತು. ಜಿಡಿಪಿ ಮತ್ತು ಪರ್ಚೇಸಿಂಗ್ ಪವರ್ ಪ್ಯಾರಿಟಿ ಎಕ್ಸ್ ಚೇಂಝ್ ರೇಟ್ಸ್ (ಪಿಪಿಪಿ) ಅನ್ನು ಬಳಸಿ ಅದು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಇದರ ಪ್ರಕಾರ ಭಾರತ ಚೀನಾದ ಹಿಂದೆ ಮತ್ತು ಯುಎಸ್ ನಿಂದ ಮುಂದೆ ಇರಲಿದೆ.
ನರೇಂದ್ರ ಮೋದಿ ಸರ್ಕಾರದ ಉತ್ತಮ ಹಣಕಾಸು ನೀತಿ ಮತ್ತು ಯೋಜನೆಗಳು ಭಾರತದ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಿವೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.