ನವದೆಹಲಿ: ಮೂಲಸೌಕರ್ಯ ವೃದ್ಧಿ ಮತ್ತು ಸಮರ್ಪಕ ಟ್ರೈನಿಂಗ್ ಕ್ಯಾಂಪ್ಗಳನ್ನು ನಿರ್ಮಾಣ ಮಾಡುತ್ತಿರುವ ಭಾರತೀಯ ಸೇನೆಯು ಇದೀಗ ಶಿಮ್ಲಾದಲ್ಲಿನ ತನ್ನ ಟ್ರೈನಿಂಗ್ ಕಮಾಂಡ್ ಅನ್ನು ಮೀರತ್ಗೆ ಸ್ಥಳಾಂತರ ಮಾಡುತ್ತಿದೆ. ಸೇನೆಯು ವಿವಿಧ ಮಟ್ಟಗಳಲ್ಲಿ ನಡೆಸುತ್ತಿರುವ ಮರುನಿರ್ಮಾಣ ಕಾರ್ಯದ ಭಾಗವಾಗಿ ಇದನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಖರ್ಚುಗಳನ್ನು ಉಳಿಸಲು ಮತ್ತು ಕೇಂದ್ರ ಕಛೇರಿಯಿಂದ ಬೆಟ್ಟ ಪ್ರದೇಶಕ್ಕೆ ಪ್ರಯಾಣಿಸಲು ತಗಲುವ ಸಮಯವನ್ನು ಉಳಿಸುವ ಸಲುವಾಗಿ ಟ್ರೈನಿಂಗ್ ಕಮಾಂಡ್ ಅನ್ನು ಸ್ಥಳಾಂತರ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಕಛೇರಿಯನ್ನು ಶಿಮ್ಲಾದಿಂದ ಉತ್ತಮ ಮೂಲಸೌಕರ್ಯವಿರುವ ಮತ್ತೊಂದು ಜಾಗಕ್ಕೆ ಸ್ಥಳಾಂತರ ಮಾಡುವ ಅಗತ್ಯವಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ ಎನ್ನಲಾಗಿದೆ.
ಸೇನೆಯ ಪ್ರಕಾರ, ಟ್ರೈನಿಂಗ್ ಕಮಾಂಡ್ ನಿರ್ಮಾಣ ಮಾಡಲು ಮೀರತ್ ಉತ್ತಮ ಸ್ಥಳವಾಗಿದ್ದು, ಇದು ಎಕ್ಸ್ಪ್ರೆಸ್ ಹೈವೇ, ಕ್ಷಿಪ್ರ ರೈಲು ಸಾರಿಗೆ ಕಾರಿಡಾರ್ ಕೂಡ ಇಲ್ಲಿ ನಿರ್ಮಾಣವಾಗುತ್ತಿದೆ. ARTRACಗೆ ಟ್ರೈನಿಂಗ್ ಕಮಾಂಡ್ ಅನ್ನು ನಿರ್ಮಿಸುವ ಜಬವಾಬ್ದಾರಿಯನ್ನು ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಟ್ರೈನಿಂಗ್ ನೀಡಲಿದೆ.
ಸೇನೆಯ ಉನ್ನತ ಮಟ್ಟದ ಜನರಲ್ಗಳು ನಡೆಸಿದ ಸಮಗ್ರ ಅಧ್ಯಯನದ ಆಧಾರದಲ್ಲಿ ಟ್ರೈನಿಂಗ್ ಕಮಾಂಡ್ ಅನ್ನು ಮರು ನಿರ್ಮಾಣ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.