ಮೋದಿ ಸರ್ಕಾರದ ಆಡಳಿತದಲ್ಲಿ ಗೋ ರಕ್ಷಣೆ ಅತ್ಯಂತ ಬಿಸಿ ಬಿಸಿ ಚರ್ಚೆಯ ವಿಷಯವಾಗಿಯೇ ಮುಂದುವರೆದಿದೆ. ಮಾಧ್ಯಮದಲ್ಲಿರುವವರು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು, ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ಮತ್ತು ತಮ್ಮ ಗೋವುಗಳನ್ನು ರಕ್ಷಿಸಲು ಕಟುವಾಗಿ ವರ್ತಿಸುವವರಿಗೆ ಗೋ ರಕ್ಷಕರು ಎಂದು ಹಣೆಪಟ್ಟಿಯನ್ನು ಕಟ್ಟಿ ಅವರ ಬಗ್ಗೆ ಚರ್ಚೆ, ಸಂವಾದಗಳನ್ನು ನಡೆಸುತ್ತಲೇ ಇದ್ದಾರೆ.
ಗೋ ರಕ್ಷಣೆಯ ವಿಷಯವನ್ನು ಮುಸ್ಲಿಂರ ಮೇಲಿನ ಗುಂಪು ಹಲ್ಲೆಗೆ ಲಿಂಕ್ ಮಾಡುವ ಬೆಳವಣಿಗೆಯೂ ಇತ್ತೀಚಿನ ದಿನಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ.
ಅರ್ಹತೆ ಇಲ್ಲದವರು ಕೂಡ ಇತ್ತೀಚಿನ ವರ್ಷಗಳಲ್ಲಿ ಈ ವಿಷಯದ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ, ಗೋವಿನ ವಿಷಯ ನೇರವಾಗಿ ಮೋದಿ ಸರ್ಕಾರಕ್ಕೆ ಸಂಬಂಧಿಸಿದ್ದಾಗಿದೆ. ಇಂತಹ ಘಟನೆಗಳು ಸಂಭವಿಸಿದಾಗ ಕೆಲವು ಮಾಧ್ಯಮಗಳು, ಪ್ರತಿಪಕ್ಷಗಳು, ಹೋರಾಟಗಾರರು ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಅವಕಾಶವಾದಿಗಳಾಗುವ ಮಾಧ್ಯಮಗಳು, ಕೋಮು ಸಂಘರ್ಷ ನಡೆಯುತ್ತಿದೆ ಎಂದು ಬೊಬ್ಬಿಡುತ್ತವೆ. ಆದರೆ ವಾಸ್ತವವಾಗಿ ಅಂತಹ ಯಾವುದೇ ಸನ್ನಿವೇಶಗಳು ನಡೆದಿರುವುದಿಲ್ಲ.
ಇತ್ತೀಚಿಗೆ, ಸಾರ್ವಜನಿಕ ನಿಯಮ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಬರೆಯುವ ರುಚಿರ್ ಫೆರ್ರೆರೋ ಶರ್ಮಾ ಅವರು, ಈ ವಿಷಯದ ಬಗ್ಗೆ ಸ್ವರಾಜ್ಯಕ್ಕೆ ಬರೆದ ಲೇಖನದಲ್ಲಿ ಉಲ್ಲೇಖ ಮಾಡಿದ್ದಾರೆ. ಅವರು ಈ ವಿಷಯದ ಬಗ್ಗೆ ಉತ್ತಮ ಒಳನೋಟವನ್ನು ನೀಡಿದ್ದಾರೆ. ಹೇಗೆಂದರೆ.
ಶರ್ಮಾ ಅವರ ಪ್ರಕಾರ, ಗೋ ಸಂರಕ್ಷಣೆ ಮತ್ತು ಮುಸ್ಲಿಂ ಗುಂಪು ಹಲ್ಲೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಮಸ್ಯೆಗಳು ನಿಜವಾಗಿ ಗುಂಪು ನ್ಯಾಯ ಮತ್ತು ಮಾಂಸ ಮಾಫಿಯಾದ ಸಮಸ್ಯೆಗಳು.
ಈಗ ಇದು ಕೇವಲ ಕಾಸ್ಮೆಟಿಕ್ ಬದಲಾವಣೆಯಾಗಿದೆ? ನಿಜವಾಗಿಯೂ ಅಲ್ಲ.
ಇದು ಭಾರತದಲ್ಲಿನ ಗ್ರಾಮೀಣ ಬಡವರ ದುಷ್ಪರಿಣಾಮವನ್ನು ಬೆಳಕಿಗೆ ತರುತ್ತದೆ, ಧರ್ಮದ ಆಧಾರದ ಮೇಲೆ ಬಲಿಪಶುಗಳಾಗಿದ್ದಾರೆ ಎಂದು ಕರೆಯಲ್ಪಡುವವರಿಗಿಂತ ಹೆಚ್ಚು ಬಲಿಪಶುಗಳು ಇವರಾಗಿದ್ದಾರೆ. ಹಲ್ಲೆಗಳಂತಹ ಘಟನೆ ನಡೆದಾಗ ಗೋವಿಗಿಂತಲೂ ಹೆಚ್ಚಾಗಿ ಅದನ್ನು ಕಾನೂನು ಸುವ್ಯವಸ್ಥೆಯ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ.
ಈ ಒಳನೋಟ ನಿಜಕ್ಕೂ ಜ್ಞಾನೋದಯ ಮಾಡುವಂತಹುದು, ಯಾಕೆಂದರೆ ಸಮಸ್ಯೆಯ ಆಳಕ್ಕೆ ಹೋಗಿ ಸಮಸ್ಯೆ ಸೃಷ್ಟಿಯಾಗಲು ಕಾರಣ ಏನು ಎಂಬ ಅಂಶಗಳ ಮೇಲೆ ಇದು ಬೆಳಕು ಚೆಲ್ಲುತ್ತದೆ.
ಇಂತಹ ಘಟನೆಗಳಿಗೆ ಕಾರಣವೇನು?
ನಮ್ಮ ವ್ಯವಸ್ಥೆಯು ಶ್ರೀಮಂತರಿಗೆ ಪ್ರಾಮುಖ್ಯತೆಯನ್ನು ನೀಡಿದಷ್ಟು ಬಡವರಿಗೆ ಪ್ರಮುಖ್ಯತೆ ನೀಡದಿರುವುದು ಇದಕ್ಕೆ ಪ್ರಮುಖ ಕಾರಣ.
ಗೋ ರಕ್ಷಣೆಯ ವಿಷಯದಲ್ಲಿ ಇಬ್ಬರು ಪ್ರಮುಖರಾಗುತ್ತಾರೆ. ಒಂದು ಹಸುವನ್ನು ಬದುಕಿಸಲು ಹೋರಾಡುವವರು, ಮತ್ತೊಂದು ಹಸುವನ್ನು ಕೊಲ್ಲಲು ಬಯಸುವ ವ್ಯಾಪಾರಿಗಳು.
ತಮ್ಮ ಹಸು ಕಳವಾಗಿದೆ ಎಂದು ತಿಳಿದ ಕೂಡಲೇ ಹಸು ಮಾಲೀಕರು ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ ಸಾಮಾನ್ಯವಾಗಿ ಪೊಲೀಸರು ಇದಕ್ಕೆ ಸ್ಪಂದಿಸುವುದೇ ಇಲ್ಲ. ಕೆಲವೊಮ್ಮೆ ನಿಮ್ಮೊಳಗೇ ಸಮಸ್ಯೆ ಬಗೆಹರಿಸಿ ಎಂದು ಸಲಹೆ ನೀಡಿ ಬಿಡುತ್ತಾರೆ.
ಈ ಸಂದರ್ಭದಲ್ಲೇ ಹಸುವನ್ನು ಕಳೆದುಕೊಂಡ ವ್ಯಕ್ತಿ, ಕುಟುಂಬ ಕಾನೂನನ್ನು ಕೈಗೆತ್ತಿಕೊಳ್ಳಲು ಹೋಗುತ್ತದೆ. ಇದು ಒಂಥರನಾದ ಗುಂಪು ನ್ಯಾಯ.
ಈ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ? ಖಂಡಿತಾ ಇಲ್ಲ. ಈ ಸಮಸ್ಯೆಯ ಬೇರನ್ನು ಅರ್ಥಮಾಡಿಕೊಳ್ಳುವ ಒಂದು ಪ್ರಯತ್ನವಷ್ಟೇ.
ಹಾಗಾದರೆ, ಗೋ ಸಂಬಂಧಿತ ಗುಂಪು ಹಲ್ಲೆಯಲ್ಲಿ ಮುಸ್ಲಿಮರೇ ಯಾಕೆ ಸಂತ್ರಸ್ಥರು?
ಯಾಕೆಂದರೆ, ಮಾಂಸ ವ್ಯಾಪಾರವನ್ನು ಮಾಡುವುದು ಬಹುತೇಕ ಮುಸಲ್ಮಾನರೇ. ಅಕ್ರಮ ಗೋ ಕಳ್ಳಸಾಗಾಣೆಯಲ್ಲಿ ಅವರೇ ಇರುತ್ತಾರೆ. ಮಾಂಸ ಮಾರುಕಟ್ಟೆಯ ಪ್ರಾಬಲ್ಯ ಇಂದಿಗೂ ಅವರ ಕೈಯಲ್ಲೇ ಇದೆ.
ಈ ವ್ಯಾಪಾರಕ್ಕೆ ದೂಡಲ್ಪಟ್ಟ ಸಾಮಾನ್ಯ ಮುಸ್ಲಿಂ ಕೂಡ ಇದರ ಬಲಿಪಶು ಆಗಿದ್ದಾನೆ ಎಂಬುದು ಕೂಡ ನಿಜ.
ಅಕ್ರಮ ಮಾಂಸ ಉದ್ಯಮದಲ್ಲಿ ತೊಡಗಿಸಿಕೊಂಡ ಶ್ರೀಮಂತರು ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಯುವಕರನ್ನು ಈ ದಂಧೆಗೆ ಇಳಿಸಿ ಸಂತ್ರಸ್ಥರನ್ನಾಗಿಸುತ್ತಿದ್ದಾರೆ. ಅವರ ಉದ್ಯಮವನ್ನು ಬೆಳೆಸುವುದಷ್ಟೇ ಅವರ ಕಾಯಕ. ಗೋ ಕಳ್ಳತನ ಮಾಡಲು ಇವರೇ ಯುವಕರಿಗೆ ಉತ್ತೇಜನವನ್ನು ನೀಡುತ್ತಾರೆ.
ಅಂದರೆ ನಿಜವಾದ ಅರ್ಥದಲ್ಲಿ ಗೋ ಮಾಲೀಕರು ಮತ್ತು ಗೋ ಕಳ್ಳರು ಇಬ್ಬರೂ ಇಲ್ಲಿ ಸಂತ್ರಸ್ಥರು. ” ಇವರುಗಳು ಅಮಾನುಷ ಮತ್ತು ಅವಮಾನಕರ ಗ್ರಾಮೀಣ ಬಡತನದ ಸಂತ್ರಸ್ಥರು. ಮಾಂಸ ದಂಧೆಯ ಕ್ರೂರ ಉದ್ಯಮಿಗಳ, ರಾಜಕೀಯ ಹಿತಾಸಕ್ತಿಗಳ ಸಂತ್ರಸ್ಥರು. ದೂರು ನೀಡಿದಾಗ ಸರಿಯಾಗಿ ಸ್ಪಂದಿಸದ ಪೊಲೀಸರಿಂದ ಸಂತ್ರಸ್ಥರಾದವರು” ಎಂದು ಶರ್ಮಾ ಹೇಳುತ್ತಾರೆ.
ಹೀಗಾಗಿ, ಈ ಘಟನೆಗಳಲ್ಲಿ ನಿಜವಾದ ಆರೋಪಿ ರಾಜಕೀಯ ಮತ್ತು ನೈತಿಕ ಭ್ರಷ್ಟತನ.
ಹಾಗಾದರೆ ಪರಿಹಾರ ಏನು?
ಇಂತಹ ಯುವಕರು ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ದಾರಿಯನ್ನು ಒದಗಿಸಿಕೊಡುವುದು, ಇದರಿಂದ ಅವರು ಅಕ್ರಮ ಮಾಂಸ ದಂಧೆಗೆ ಇಳಿಯಬೇಕಾದ ಅನಿವಾರ್ಯತೆ ಇರುವುದಿಲ್ಲ. ಕಸಾಯಿಖಾನೆಯಲ್ಲಿ, ಅಕ್ರಮ ಗೋ ಸಾಗಾಣೆಯಲ್ಲಿ ಜೀವನ ಕಳೆಯಬೇಕೆಂದು ಎಷ್ಟು ಮಂದಿ ತಾನೆ ಬಯಸಿಯಾರು?
ಗೋ ಕಳ್ಳಸಾಗಾಣೆಯಂತಹ ಪ್ರಕರಣಗಳನ್ನು ತಡೆಯಲು ಕಮ್ಯೂನಿಟಿ ಪೊಲೀಸಿಂಗ್ ಅನ್ನು ನಿಯೋಜನೆಗೊಳಿಸುವುದು ಕೂಡ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಲ್ಲದು.
ಗೋ ರಕ್ಷಕರು ಮತ್ತು ಗೋ ಕಳ್ಳ ಸಾಗಾಣೆದಾರರಿಗೆ ಕಡಿವಾಣ ಹಾಕುವಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು.
ಮಾಧ್ಯಮಗಳು ಅವಕಾಶವಾದಿಗಳಂತೆ ವರ್ತಿಸಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಬದಲು ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಪ್ರಸ್ತುತಪಡಿಸುವುದು ಕೂಡ ಈ ನಿಟ್ಟಿನಲ್ಲಿ ಸಹಕಾರಿಯಾಗಬಲ್ಲದು. ತಳಮಟ್ಟದಲ್ಲಿ ಏನು ಆಗುತ್ತಿದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ ಮತ್ತು ಗಮನವೂ ಅದರತ್ತಲೇ ಇರಬೇಕು.
ಈ ವೀಡಿಯೋ ನೋಡಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.