ನವದೆಹಲಿ: 2019-20 ರ ಮೊದಲಾರ್ಧದಲ್ಲಿ ಭಾರತಕ್ಕೆ 11.5 ಲಕ್ಷ ಉದ್ಯೋಗಿಗಳು ಸೇರ್ಪಡೆಗೊಳ್ಳಲಿದ್ದಾರೆ. ಪ್ರಯಾಣ, ಆತಿಥ್ಯ ಮತ್ತು ಬಿಪಿಒ / ಐಟಿ ವಲಯದಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವರದಿಗಳು ತಿಳಿಸಿವೆ.
“ಸ್ಟಾಕ್ ಮಾರ್ಕೆಟ್ನ ಸಕಾರಾತ್ಮಕತೆ, ಹೂಡಿಕೆಯಲ್ಲಿ ಹೆಚ್ಚಳ ಉದ್ಯೋಗ ಸೃಷ್ಟಿಯ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಕಳೆದ ಮೊದಲಾರ್ಧದಲ್ಲಿ ಶೇ. 2 ರಷ್ಟು ಕುಸಿತವನ್ನು ಕಂಡಿದ್ದ ತಲಾ ಉದ್ಯೋಗ, ಈ ವರ್ಷದ ಮೊದಲಾರ್ಧದಲ್ಲಿ ಶೇ. 3ರಷ್ಟು ಏರಿಕೆಯನ್ನು ಕಾಣಲಿದೆ” ಎಂದು ಟೀಮ್ ಲೀಸ್ ಸರ್ವಿಸ್ ಎಕ್ಸಿಕ್ಯೂಟಿವ್ ಉಪಾಧ್ಯಕ್ಷ ರಿತುಪರ್ಣ ಚಕ್ರವರ್ತಿ ಹೇಳಿದ್ದಾರೆ.
‘ಎಂಪ್ಲಾಯ್ಮೆಂಟ್ ಔಟ್ ಲುಕ್” ವರದಿಯನ್ನು ಆಧರಿಸಿ ಔಪಚಾರಿಕ ವಲಯದಲ್ಲಿ 11.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಅತ್ಯಂತ ಭರವಸೆಯಿಂದ ಹೇಳಿದ್ದಾರೆ.
ರಿಟೇಲ್, ಲಾಜಿಸ್ಟಿಕ್ಸ್, ಶಿಕ್ಷಣ ಸೇವೆ, ಗ್ರಾಹಕ ಸರಕುಗಳು ಕ್ರಮವಾಗಿ 1.66 ಲಕ್ಷ, 1.49ಲಕ್ಷ, 1.17 ಲಕ್ಷ, 1.10 ಲಕ್ಷದಷ್ಟು ಉದ್ಯೋಗವನ್ನು ಸೃಷ್ಟಿಸಲಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.