ನವದೆಹಲಿ: ಯುಎಸ್ ಡಿಪಾರ್ಟ್ಮೆಂಟ್ ಆಫ್ ಕಾಮರ್ಸಿನ ವಾರ್ಷಿಕ ವ್ಯಾಪಾರ ಮಿಶನ್ ಪ್ರೋಗ್ರಾಂ ಅಡಿಯಲ್ಲಿ 100 ಅಮೆರಿಕನ್ ಕಂಪನಿಗಳ ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿ ಉದ್ದಿಮೆ ಅವಕಾಶಗಳ ಬಗ್ಗೆ ಅರಿತುಕೊಳ್ಳಲಿದ್ದಾರೆ.
ನವದೆಹಲಿ ಮಾತ್ರವಲ್ಲದೇ, ಈ ಕಂಪನಿಗಳ ಪ್ರತಿನಿಧಿಗಳು ಅಹ್ಮದಾಬಾದ್, ಚೆನ್ನೈ, ಕೋಲ್ಕತ್ತಾ, ಮುಂಬಯಿ, ಬೆಂಗಳೂರು, ಹೈದರಾಬಾದ್ಗಳಿಗೆ ಭೇಟಿ ನೀಡಿ, ಸರ್ಕಾರಿ ನಾಯಕರನ್ನು, ಮಾರುಕಟ್ಟೆ ತಜ್ಞರನ್ನು ಮತ್ತು ಮುಂಚೂಣಿಯಲ್ಲಿರುವ ಸಂಭಾವ್ಯ ವ್ಯವಹಾರ ಪಾಲುದಾರರನ್ನು ಭೇಟಿಯಾಗಲಿದ್ದಾರೆ.
“ಯು.ಎಸ್. ಉದ್ದಿಮೆಗಳಿಗೆ ವಿಶ್ವದಾದ್ಯಂತ ತಮ್ಮ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಮಾರಾಟ ಮಾಡಲು ನ್ಯಾಯೋಚಿತ ಮತ್ತು ಪರಸ್ಪರ ವ್ಯವಹಾರವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಲಭ್ಯವಿರುವ ಪ್ರತಿಯೊಂದು ಸಂಪನ್ಮೂಲವನ್ನು ಬಳಸುವುದು ಅಮೆರಿಕದ ವಾಣಿಜ್ಯ ಇಲಾಖೆಯಲ್ಲಿನ ನಮ್ಮ ಗುರಿ” ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಹೇಳಿದ್ದಾರೆ.
ರಾಸ್ ಅವರು ಇಂದು ಅಥವಾ ನಾಳೆ ಕೇಂದ್ರ ಕೈಗಾರಿಕಾ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಲಿದ್ದಾರೆ.
2018ರಲ್ಲಿ ಯುಎಸ್ ಡಿ 58.9 ಬಿಲಿಯನ್ ಅಮೆರಿಕನ್ ಸರಕು ಮತ್ತು ಸೇವೆಗಳು ಭಾರತಕ್ಕೆ ಆಗಮಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.