ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರ ಇಸ್ರೋ ಮೇ 22 ರಂದು ಸುಧಾರಿತ ರಾಡರ್ ಇಮೇಜಿಂಗ್ ಸ್ಯಾಟಲೈಟ್ (ರಿಸ್ಯಾಟ್-2BR1) ಅನ್ನು ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಉಡಾವಣೆಗೊಳಿಸಲು ಸಜ್ಜಾಗಿದೆ. ಈ ಹಿಂದೆ ಉಡಾವಣೆಗೊಂಡಿರುವ ಸ್ಯಾಟಲೈಟ್ಗಿಂತ ಇದರ ಸಂರಚನೆಯು ವಿಭಿನ್ನವಾಗಿದೆ ಎಂದು ಇಸ್ರೋ ತಿಳಿಸಿದೆ.
ಈ ಸುಧಾರಿತ ರಿಸ್ಯಾಟ್-2BR1 ಸುಧಾರಿತ ಕಣ್ಗಾವಲು ಮತ್ತು ಇಮೇಜಿಂಗ್ ಸಾಮರ್ಥ್ಯಗಳನ್ನು ಒಳಗೊಂಡಿದೆ. ಇದರಲ್ಲಿರುವ X-ಬ್ಯಾಂಡ್ ಸಿಂಥೆಟಿಕ್ ಅಪಾರ್ಚರ್ ರಾಡರ್ ಎಲ್ಲಾ ಹವಮಾನದಲ್ಲೂ, ರಾತ್ರಿ ಮತ್ತು ಹಗಲಿನಲ್ಲೂ ಮಾನಿಟರ್ ಮಾಡಬಲ್ಲದು.
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹ್ಹಿಕಲ್ ರಾಕೆಟ್ ಮೂಲಕ ರಿಸ್ಯಾಟ್-2BR1 ಅನ್ನು ಉಡಾವಣೆಗೊಳಿಸಲಾಗುತ್ತಿದೆ. ಶ್ರೀಹರಿಕೋಟಾದಲ್ಲಿ ಉಡಾವಣಾ ಕಾರ್ಯ ಜರುಗಲಿದೆ. ಇದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಇಸ್ರೋ ಮಾಡಿಕೊಳ್ಳುತ್ತಿದೆ.
ಈ ಸ್ಯಾಟಲೈಟ್ ಉಡಾವಣೆಗೊಂಡ ಬಳಿಕ, ಇಸ್ರೋ ಕಾರ್ಟೊಗ್ರಫಿ ಸ್ಯಾಟಲೈಟ್ ಕ್ಯಾಟೊಸ್ಯಾಟ್-3 ಅನ್ನು ಉಡಾವಣೆಗೊಳಿಸಲಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮತ್ತೆರಡು ಡಿಫೆನ್ಸ್ ಸ್ಯಾಟಲೈಟ್ ಅನ್ನು ಹೊಸ ರಾಕೆಟ್ ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹ್ಹಿಕಲ್ (ಎಸ್ ಎಸ್ ಎಲ್ ವಿ) ಮೂಲಕ ಉಡಾವಣೆಗೊಳಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.