ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವೆ ನೌಕಾ ಸಮರಾಭ್ಯಾಸ ‘ವರುಣಾ 2019’ನ ಸಮುದ್ರ ಹಂತ ಇಂದಿನಿಂದ ಆರಂಭಗೊಂಡಿದೆ. ಇದೇ ಮೊದಲ ಬಾರಿಗೆ ಭಾರತದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಫ್ರೆಂಚ್ನ ಎಫ್ಎನ್ಎಸ್ ಚಾರ್ಲ್ಸ್ ಡೆ ಗೌಲ್ಲೆ ತಮ್ಮ ತಮ್ಮ ದೇಶಗಳನ್ನು ಸಮರಾಭ್ಯಾಸದಲ್ಲಿ ಮುನ್ನಡೆಸಲಿದೆ.
ಈ ಸಮರಾಭ್ಯಾಸದಲ್ಲಿ 8 ಹಡಗುಗಳು ಮತ್ತು ಎರಡು ಜಲಾಂತರ್ಗಾಮಿಗಳು ಭಾಗಿಯಾಗಲಿವೆ.
“ಸಮುದ್ರ ಹಂತಗಳನ್ನು ಎರಡು ಹಂತಗಳಲ್ಲಿ ಆಯೋಜನೆಗೊಳಿಸಲಾಗಿದೆ. ಮೊದಲ ಹಂತವು ಮೇ 7 ರಿಂದ ಮೇ 10 ರ ವರೆಗೆ ಗೋವಾದಲ್ಲಿ ನಡೆಯಲಿದೆ. ಆ್ಯಂಟಿ ಸಬ್ ಮರೀನ್ ಸಮರಾಭ್ಯಾಸ, ಲೈವ್ ಪೈರಿಂಗ್ ಡ್ರಿಲ್, ನಾವೆಲ್ ಹೆಲಿಕಾಫ್ಟರ್ ಆಪರೇಶನ್, ಯುದ್ಧವಿಮಾನ ಕ್ಯಾರಿಯರ್ಗಳ ಸಾಮಾನ್ಯ ಸುಧಾರಣಾ ಮಟ್ಟದ ಸಮರಾಭ್ಯಾಸಗಳನ್ನು ಇದು ಒಳಗೊಂಡಿದೆ. ಎರಡನೇ ಸಮುದ್ರ ಹಂತವು ಡಿಜಿಬೌಟಿಯಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ನಡೆಯಲಿದೆ” ಎಂದು ರೀರ್ ಅಡ್ಮಿರಲ್ ಸಂಜಯ್ ಜಸಿತ್ ಸಿಂಗ್ ಹೇಳಿದ್ದಾರೆ.
ಭಾರತೀಯ ನೌಕೆಯ ಪಶ್ಚಿಮ ನೌಕಾ ಕಮಾಂಡ್ ಈ ಸಮರಾಭ್ಯಾಸದಲ್ಲಿ ಭಾಗಿಯಾಗುತ್ತಿದೆ. ಐಎನ್ಎಸ್ ವಿಕ್ರಮಾದಿತ್ಯವು ತನ್ನ ಅವಿಭಾಜ್ಯ ವಾಯು ವಿಧಾನಗಳಾದ ಡಿಸ್ಟ್ರಾಯರ್ ಐಎನ್ಎಸ್ ಮುಂಬಯಿ, ಫ್ರಿಗೇಟ್ ಐಎನ್ಎಸ್ ತರ್ಕಶ್, ಫ್ಲೀಟ್ ಸಪೋರ್ಟ್ ಶಿಪ್ ಐಎನ್ಎಸ್ ದೀಪಕ್ ಮತ್ತು ಜಲಾಂತರ್ಗಾಮಿ ಇದರಲ್ಲಿ ಭಾಗಿಯಾಗಲಿದೆ.
‘ವರುಣಾ 2019’ರ ಬಂದರು ಹಂತ ಮೇ 1 ರಿಂದ ಆರಂಭಗೊಂಡು ಸೋಮವಾರ ಅಂತ್ಯಗೊಳ್ಳಲಿದೆ. ಇದು ಕ್ರಾಸ್ ವಿಸಿಟ್, ವೃತ್ತಿಪರ ಸಂವಾದ, ಚರ್ಚೆ, ಸ್ಪೋರ್ಟ್ ಫಿಕ್ಚರ್ಸ್ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಒಳಗೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.