ನವದೆಹಲಿ: ಸಮಾನ ವ್ಯಾಪಾರ ಕಾಳಜಿಗಳಿಗಾಗಿ ಭಾರತ ಮತ್ತು ಚೀನಾ ಕಾರ್ಯನಿರ್ವಹಿಸುತ್ತಿದೆ. ಇರಾನಿ ತೈಲ ಆಮದುಗಳ ಮೇಲೆ ಅಮೇರಿಕಾ ನಿರ್ಬಂಧವನ್ನು ವಿಧಿಸಿದ ಹಿನ್ನೆಲೆಯಲ್ಲಿ ತೈಲ ಮತ್ತು ಅನಿಲ ಖರೀದಿಯಲ್ಲಿ ಪರಸ್ಪರ ಸಹಕಾರಕ್ಕೆ ಉಭಯ ದೇಶಗಳು ಮುಂದಾಗಿವೆ.
ವಿಶ್ವದ ಎರಡನೇ ಮತ್ತು ಮೂರನೇ ಅತೀದೊಡ್ಡ ತೈಲ ಆಮದುದಾರ ದೇಶಗಳಾದ ಚೀನಾ ಮತ್ತು ಭಾರತಗಳು ಸಮಾನ ಕ್ಷೇತ್ರ ಮತ್ತು ಶಕ್ತಿ ಸಹಕಾರ ಪಡೆಯುವ ನಿಟ್ಟಿನಲ್ಲಿ ಪ್ರಯತ್ನವನ್ನು ಆರಂಭಿಸಿವೆ. ಉತ್ತಮ ದರಕ್ಕೆ ಉತ್ಪಾದಕರಿಂದ ತೈಲಗಳನ್ನು ಪಡೆದುಕೊಳ್ಳಲು ಒಗ್ಗಟ್ಟಾಗಿ ಚೌಕಾಸಿಯನ್ನು ಮಾಡುವುದು ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಉಭಯ ದೇಶಗಳು ತೈಲ ಮತ್ತು ಅನಿಲದ ಮೇಲೆ ಜಂಟಿ ಕಾರ್ಯ ಪಡೆಯನ್ನು ರಚನೆ ಮಾಡಿದೆ ಎಂದು ಮಾರ್ಚ್ ತಿಂಗಳಲ್ಲಿ ನವದೆಹಲಿಗೆ ಆಗಮಿಸಿದ್ದ ಚೀನಾದ ನ್ಯಾಷನಲ್ ಎನರ್ಜಿ ಅಡ್ಮಿನಿಸ್ಟ್ರೇಶನ್ ಉಪಾಧ್ಯಕ್ಷ ಲಿ ಫಾನ್ರಾಂಗ್ ಹೇಳಿದ್ದರು. ಇದು ಇಂಧನ ಸಹಕಾರಕ್ಕಾಗಿ ಭಾರತ ಮತ್ತು ಚೀನಾ ಜಂಟಿಯಾಗಿ ಹೊಂದಿರುವ ಏಕೈಕ ಕಾರ್ಯಪಡೆಯಾಗಿದೆ.
ತೈಲ ಖರೀದಿಯಂತಹ ಪ್ರಮುಖ ವಿಷಯಗಳ ಬಗ್ಗೆ ಉಭಯ ದೇಶಗಳು ಅತ್ಯಂತ ನಿಕಟವಾಗಿ ಚರ್ಚೆಯನ್ನು ನಡೆಸುತ್ತಿವೆ ಎಂದು ಬೀಜಿಂಗ್ ಮೂಲಗಳು ತಿಳಿಸಿವೆ.
ಭಾರತ ಮತ್ತು ಚೀನಾದ ಇಂಧನ ಸುರಕ್ಷತೆಗೆ ಇರಾನ್ ಅತೀ ಮುಖ್ಯ. ಈ ಎರಡು ದೊಡ್ಡ ಆರ್ಥಿಕತೆಗಳಿಗೆ ಇರಾನ್ ಅತೀ ಹೆಚ್ಚು ಪ್ರಮಾಣ ಕಚ್ಛಾ ತೈಲಗಳನ್ನು ಪೂರೈಕೆ ಮಾಡುತ್ತಿತ್ತು. ಆದರೆ ಅಮೆರಿಕಾ ಈ ದೇಶದ ಮೇಲೆ ನಿರ್ಬಂಧವನ್ನು ವಿಧಿಸಿರುವ ಪರಿಣಾಮವಾಗಿ ಉಭಯ ದೇಶಗಳ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.