ನವದೆಹಲಿ: ಇತ್ತೀಚಿನ ವರದಿಯ ಪ್ರಕಾರ, ಗೃಹ ಸಚಿವಾಲಯವು 2018 ರಲ್ಲಿ ಸುಮಾರು 25 ಲಕ್ಷ ಇ-ವೀಸಾ ಅರ್ಜಿಗಳನ್ನು ಪುರಸ್ಕರಿಸಿದೆ. ಅಂದರೆ 2015 ಕ್ಕಿಂತ ಇ-ವೀಸಾ ಮೂಲಕ ಭಾರತಕ್ಕೆ ಆಗಮಿಸುವವರ ಸಂಖ್ಯೆ 5 ಪಟ್ಟು ಹೆಚ್ಚಳವಾಗಿದೆ.
2015ರಲ್ಲಿ ಗೃಹಸಚಿವಾಲಯದಡಿಯ ವಲಸೆ ಮಂಡಳಿಯು 5.29 ಲಕ್ಷ ವೀಸಾಗಳನ್ನು ಮಂಜೂರು ಮಾಡಿತ್ತು, ಈ ಸಂಖ್ಯೆ 2018ಕ್ಕೆ 25.15 ಲಕ್ಷಕ್ಕೆ ಏರಿಕೆಯಾಗಿದೆ. ಕೇವಲ ಮೂರು ವರ್ಷಗಳಲ್ಲಿ ಭಾರತಕ್ಕೆ ಆಗಮಿಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.
ಭಾರತೀಯ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ, ಪ್ರಮುಖ ಕೆಟಗರಿ ವೀಸಾ ಸಂಖ್ಯೆಯನ್ನು 26 ರಿಂದ 21 ಕ್ಕೆ ಇಳಿಸಿತು, ಇದೇ ವೇಳೆ, ಸಬ್ ಕೆಟಗರಿ ವೀಸಾವನ್ನು 104 ರಿಂದ 65 ಕ್ಕೆ ಇಳಿಸಿತು.
ಡಿಜಿಟಲೀಕರಣ ಕಾರ್ಯಕ್ರಮದಡಿ, ಭಾರತೀಯ ರಾಯಭಾರ ಕಛೇರಿಗಳು ರೆಗ್ಯುಲರ್ ಅಥವಾ ಪೇಪರ್ ವೀಸಾಗಳ ಸಂಖ್ಯೆಯನ್ನು 45 ಲಕ್ಷದಿಂದ 35 ಲಕ್ಷಕ್ಕೆ 2015-18ರ ವೇಳೆಯಲ್ಲಿ ಕುಗ್ಗಿಸಿದೆ.
ಪ್ರಸ್ತುತ 166 ದೇಶಗಳ ನಾಗರಿಕರು ಹೆಚ್ಚು ಪ್ರಕ್ರಿಯೆಗಳನ್ನು ನಡೆಸದೆ, ಇ-ವೀಸಾಗಳನ್ನು ಪಡೆದು ಭಾರತಕ್ಕೆ ಆಗಮಿಸಬಹುದಾಗಿದೆ. ಅಲ್ಲದೇ, ಇ-ಟೂರಿಸ್ಟ್ ಮತ್ತು ಇ-ಬ್ಯುಸಿನೆಸ್ ಪಡೆದವರು 1 ವರ್ಷಗಳ ಕಾಲ ಭಾರತದಲ್ಲಿ ಇರಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.