ನವದೆಹಲಿ: ಮಹಾರಾಷ್ಟ್ರದಲ್ಲಿ ಮಾವಿನ ಹಣ್ಣು ರೈತರ ಬಹುದೊಡ್ಡ ಆದಾಯದ ಮೂಲವಾಗಿದೆ. ಮಾವಿನ ಹಣ್ಣಿನ ಸೀಸನ್ ಆರಂಭವಾಗುತ್ತಿದ್ದಂತೆ, ಗಲ್ಫ್ ದೇಶಗಳಿಗೆ ಇದರ ರಫ್ತು ಆರಂಭವಾಗಿದೆ. ಇದುವರೆಗೆ ಸುಮಾರು 100 ಟನ್ ಮಾವಿನ ಹಣ್ಣನ್ನು ಅಗ್ರಿಕಲ್ಚರ್ ಮಾರ್ಕೆಟಿಂಗ್ ಬೋರ್ಡ್ ಮೂಲಕ ಈ ರಾಜ್ಯದಿಂದ ರಫ್ತು ಮಾಡಲಾಗಿದೆ. ಮಹಾರಾಷ್ಟ್ರದ ದೊಡ್ಡ ಮಾವಿನಹಣ್ಣು ಮಾರುಕಟ್ಟೆಯಾದ ವಾಶಿ ಅಗ್ರಿಕಲ್ಚರ್ ಮಾರ್ಕೆಟ್ ಪ್ರೊಡ್ಯೂಸ್ ಕಮಿಟಿಯು 70,000 ಬಾಕ್ಸ್ ಹಣ್ಣನ್ನು ನಿತ್ಯ ಸ್ವೀಕರಿಸುತ್ತದೆ, ಇದರಲ್ಲಿ ಶೇ.30ರಷ್ಟು ರಫ್ತು ಮಾಡಲಾಗುತ್ತದೆ.
ಅಲ್ಫೋನ್ಸ್ ಮಾದರಿಯ ಮಾವಿನ ಹಣ್ಣುಗಳು ಮಹಾರಾಷ್ಟ್ರ ಮತ್ತು ಕರ್ನಾಟಕ ಕೊಂಕಣ್ ಭಾಗದಿಂದ ಬರುತ್ತಿವೆ. ಈ ಮಾವಿನ ಹಣ್ಣು ಯುಎಸ್ ಮತ್ತು ಯುರೋಪಿಯನ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಹೊಂದಿವೆ, ಮಹಾರಾಷ್ಟ್ರದ ಅಲ್ಫೋನ್ಸ್ ಹಣ್ಣಿಗೆ ರೂ.800-1000 ಇದೆ, ಕರ್ನಾಟಕದ ಅಲ್ಫೋನ್ಸ್ ಹಣ್ಣಿಗೆ 600-1200 ರೂಪಾಯಿ ಇದೆ. ಒಂದು ಬಾಕ್ಸಿನಲ್ಲಿ ನಾಲ್ಕರಿಂದ 5 ಡಜನ್ ಮಾವಿನ ಹಣ್ಣು ಇರುತ್ತದೆ.
ಈ ಬಾರಿ ಮಾವಿನ ಹಣ್ಣಿನ ರಫ್ತು ಹೆಚ್ಚಳವನ್ನು ಕಾಣಲಿದ್ದು, ಕೃಷಿ ರಫ್ತಿಗೆ ದೊಡ್ಡ ಕೊಡುಗೆಯನ್ನು ನೀಡಲಿದೆ. ಕಳೆದ ವರ್ಷ ಕೃಷಿ ಉತ್ಪಾದನೆಯಿಂದ, 40 ಬಿಲಿಯನ್ ಡಾಲರ್ ಸಂಪಾದನೆ ಮಾಡಿದೆ. ಇದು ಟೆಕ್ಸ್ ಟೈಲ್ ಮತ್ತು ಗಾರ್ಮೆಂಟ್ಗಿಂತಲೂ ಹೆಚ್ಚಿನ ಸಂಪಾದನೆಯಾಗಿದೆ.
ಅತೀ ಹೆಚ್ಚು ರಫ್ತುಗೊಳ್ಳುವ 10 ಕೃಷಿ ಸರಕುಗಳೆಂದರೆ ಸೀಗಡಿಗಳು, ಮಾಂಸ, ಬಾಸಮತಿ ಅಕ್ಕಿ, ಬಾಳೆಹಣ್ಣುಗಳು ಮತ್ತು ದಾಳಿಂಬೆ, ಆಲೂಗಡ್ಡೆ, ಸಸ್ಯದ ಭಾಗಗಳು / ಔಷಧೀಯ ಗಿಡಮೂಲಿಕೆಗಳು ಸೇರಿದಂತೆ ಗಿಡಮೂಲಿಕೆಗಳು, ಪೌಷ್ಠಿಕಾಂಶಗಳು, ಸುಗಂಧ ದ್ರವ್ಯಗಳು, ಮಸಾಲೆಗಳು (ಜೀರಿಗೆ, ಅರಿಶಿನ, ಮೆಣಸು) ಮತ್ತು ಸಾವಯವ ಆಹಾರ. ಮೋದಿ ಸರಕಾರದ ಅವಧಿಯಲ್ಲಿ ದೇಶದ ಕೃಷಿ ಕ್ಷೇತ್ರವು ಪುನರುಜ್ಜೀವನಗೊಳ್ಳುತ್ತಿದೆ. 2017-18ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಶೇ. 4.5 ರಷ್ಟು ಬೆಳವಣಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.