ನವದೆಹಲಿ: ಲೋಕಸಭಾ ಸಮರ ಬಿಸಿ ತಾರಕಕ್ಕೇರುತ್ತಿದ್ದಂತೆ ಕೆಲವೊಂದು ಮಾಧ್ಯಮಗಳು ಫೇಕ್ ನ್ಯೂಸ್ಗಳನ್ನು, ತಿರುಚಿದ ಸುದ್ದಿಗಳನ್ನು ಹರಿಬಿಡುವ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಮಾಧವ್ ಅವರು, ಬಿಜೆಪಿಗೆ ಬಹುಮತ ಸಿಗುವುದಿಲ್ಲ, ಮೈತ್ರಿಗಳ ನೆರವು ಪಡೆಯುವುದು ಅನಿವಾರ್ಯ ಎಂದಿದ್ದಾರೆ ಎಂಬ ಸುದ್ದಿಗಳನ್ನು ಹಲವಾರು ಮಾಧ್ಯಮಗಳು ಬಿತ್ತರಗೊಳಿಸಿವೆ. ಎನ್ಡಿಟಿವಿ, ಬ್ಯುಸಿನೆಸ್ ಸ್ಟ್ಯಾಂಡರ್ಡ್ ಸೇರಿದಂತೆ ಹಲವಾರು ಮಾಧ್ಯಮಗಳು ಇದನ್ನು ಪ್ರಕಟಗೊಳಿಸಿದೆ. ರಾಮ್ ಮಾಧವ್ ಬಿಜೆಪಿಯ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ಮಾಡಿವೆ. ಆದರೆ ರಾಮ್ ಮಾಧವ್ ಆ ರೀತಿ ಹೇಳಿಯೇ ಇಲ್ಲ.
‘ಬಿಜೆಪಿ ಬಹುಮತ ಪಡೆಯುವ ವಿಶ್ವಾಸದಲ್ಲಿದ್ದು, ಮೈತ್ರಿ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚನೆ ಮಾಡುವುದು ಖಚಿತ’ ಎಂದು ರಾಮ್ ಮಾಧವ್ ಸಂದರ್ಶನದಲ್ಲಿ ಹೇಳಿರುವುದು. ಆದರೆ ಈ ಹೇಳಿಕೆಯನ್ನು ಮಾಧ್ಯಮದವರು, ‘ಬಿಜೆಪಿ ಸರ್ಕಾರ ರಚನೆಗೆ ಮೈತ್ರಿ ಪಕ್ಷಗಳ ನೆರವು ಅಗತ್ಯ ಎಂದು ರಾಮ್ ಮಾಧವ್ ಹೇಳಿದ್ದಾರೆ’ ಎಂದು ತಿರುಚಿಬಿಟ್ಟಿವೆ.
ಸಂದರ್ಶನದಲ್ಲಿ, ನೀವು ಮತ್ತೊಮ್ಮೆ ಬಹುಮತವನ್ನು ಪಡೆಯುವಿರಾ? ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿರುವ ರಾಮ್ಮಾಧವ್ ಅವರು, ‘ಬಹುಮತ ಪಡೆಯುವ ಸಂಪೂರ್ಣ ವಿಶ್ವಾಸ ನಮಗಿದೆ. ಸ್ವತಂತ್ರವಾಗಿ ಬಿಜೆಪಿಯೊಂದೇ ಬಹುಮತ ಪಡೆಯಲಿದೆ, ಕನಿಷ್ಠ ಪಕ್ಷ ಮೈತ್ರಿಗಳೊಂದಿಗೆ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತೇವೆ. ಬಿಜೆಪಿಗೆ ಬಹುಮತ ಸಿಗುವ ಸಂಪೂರ್ಣ ಭರವಸೆ ನಮಗಿದೆ’ ಎಂದಿದ್ದಾರೆ.
Another mainstream media hit-job. While @rammadhavbjp clearly says BJP is confident of returning to power ‘with NDA alliance partners’ media twists it as ‘BJP will need allies to win’..Anyone can tell the stark difference b/w these 2 sentences but not Indian media, apparently. pic.twitter.com/2Ly1zDS4HN
— Ashish Dwivedi (@ashish_dw93) May 6, 2019
ಬಿಜೆಪಿ ಬಹುಮತ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ನಿರಂತರವಾಗಿ ವ್ಯಕ್ತಪಡಿಸಿದ್ದಾರೆ. ಆದರೂ ಮಾಧ್ಯಮದವರು, ಬಿಜೆಪಿ ಸರ್ಕಾರ ರಚಿಸಲು ಮೈತ್ರಿಗಳ ನೆರವು ಬೇಕು ಎನ್ನುವ ಮೂಲಕ ರಾಮ್ ಮಾಧವ್ ದೌರ್ಬಲ್ಯವನ್ನು ಒಪ್ಪಿಕೊಂಡಿದ್ದಾರೆ ಎನ್ನುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.