ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಸೋಮವಾರ 10ನೇ ತರಗತಿ ಸಿಬಿಎಸ್ಇ ಫಲಿತಾಂಶವನ್ನು ಪ್ರಕಟಗೊಳಿಸಿದೆ. ಫಲಿತಾಂಶಗಳು ಸಿಬಿಎಸ್ಇಯ ಅಧಿಕೃತ ವೆಬ್ಸೈಟ್ ಆದ cbseresults.nic.in ಮತ್ತು cbseresults.nic.in ನಲ್ಲಿ ಪ್ರಕಟಗೊಂಡಿದೆ. ಕಳೆದ ವಾರವಷ್ಟೇ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿತ್ತು.
ದೇಶದ ಒಟ್ಟು 6,000 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 18,27,471 ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಯನ್ನು ಬರೆದಿದ್ದಾರೆ. ಫೆಬ್ರವರಿ 21ರಿಂದ ಮಾರ್ಚ್ 29ರವರೆಗೆ ಪರೀಕ್ಷೆ ನಡೆದಿತ್ತು.
ಸುಮಾರು 16 ಲಕ್ಷ ಮಕ್ಕಳು ಪಾಸಾಗಿದ್ದು, 2018 ರಲ್ಲಿ 80.70% ಇದ್ದ ಫಲಿತಾಂಶದ ಪ್ರಮಾಣ 2019 ರಲ್ಲಿ ಶೇ. 4.04ರಷ್ಟು ಏರಿಕೆಯೊಂದಿಗೆ ಶೇ. 91.10% ಆಗಿದೆ. ಶೇ. 99 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಕೇಂದ್ರೀಯ ವಿದ್ಯಾಲಯಗಳು ಅತ್ಯುತ್ತಮ ಸಾಧನೆ ಮಾಡಿವೆ.
500 ಅಂಕಗಳಿಗೆ 499 ಅಂಕಗಳನ್ನು ಪಡೆದು 13 ವಿದ್ಯಾರ್ಥಿಗಳು ಟಾಪರ್ಸ್ ಆಗಿ ಹೊರಹೊಮ್ಮಿದ್ದಾರೆ. 25 ವಿದ್ಯಾರ್ಥಿಗಳು 498 ಅಂಕಗಳನ್ನು ಹಾಗೂ 58 ವಿದ್ಯಾರ್ಥಿಗಳು 497 ಅಂಕಗಳನ್ನು ಪಡೆದಿದ್ದಾರೆ. ತಿರುವನಂತಪುರಂ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಅಲ್ಲಿ ಶೇ. 99.85ರಷ್ಟು ಫಲಿತಾಂಶ ಬಂದಿದೆ.
ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, ‘ಸಿಬಿಎಸ್ಸಿ 10ನೇ ತರಗತಿ ಬೋರ್ಡ್ ಎಕ್ಸಾಂನಲ್ಲಿ ತೇರ್ಗಡೆಹೊಂದಿರುವ ಸುಮಾರು 16 ಲಕ್ಷ ವಿದ್ಯಾರ್ಥಿಗಳಿಗೆ ಅಭಿನಂದನೆಗಳು, ಈ ಬಾರಿ ತೇರ್ಗಡೆ ಹೊಂದಲಾಗದಿರುವವರಿಗೆ ಬೆಸ್ಟ್ ಆಫ್ ಲಕ್, ಮುಂದಿನ ಬಾರಿ ಸಫಲರಾಗುವಿರಿ’ ಎಂದು ಟ್ವೀಟ್ ಮಾಡಿದ್ದಾರೆ.
Congratulations to over 16 lakh students who have succeeded in #CBSE Xth board examinations and best of luck for those who couldn’t make this time but will make it in next attempt.
Overall pass percentage has increased by 4.40% from 80.70% in 2018 to 91.10% in 2019@cbseindia29— Chowkidar Prakash Javadekar (@PrakashJavdekar) May 6, 2019
ವೆಬ್ಸೈಟ್ನಲ್ಲಿ ಫಲಿತಾಂಶವನ್ನು ನೋಡಲು
1.cbseresults.nic.in ಮತ್ತು cbseresults.nic.in.ನಲ್ಲಿ ಲಾಗಿನ್ ಆಗಿ
2.ಮುಖಪುಟದಲ್ಲಿ ಕ್ಲಾಸ್ 10 ರಿಸಲ್ಟ್ ಒತ್ತಿ
3.ನಂತರ ರೋಲ್ ನಂಬರ್, ಜನ್ಮ ದಿನಾಂಕ, ಶಾಲೆಯ ಹೆಸರು, ಪರೀಕ್ಷಾ ಕೇಂದ್ರದ ಹೆಸರು ಮತ್ತು ಅಡ್ಮಿಟ್ ಕಾರ್ಡ್ ಸಂಖ್ಯೆ ನಮೋದಿಸಿ ಸಬ್ಮಿಟ್ ಬಟನ್ ಒತ್ತಿ
4.ನಂತರ ಫಲಿತಾಂಶ ಪ್ರಕಟಗೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.