ಹಿಮಾಲಯದ ರಾಜ್ಯಗಳು ದೇಶದ ಭದ್ರತೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ರಾಜ್ಯಗಳಾಗಿವೆ, ಚೀನಾದೊಂದಿಗೆ ಆ ರಾಜ್ಯಗಳು ಗಡಿಯನ್ನು ಹಂಚಿಕೊಂಡಿವೆ ಎಂಬುದು ಅತ್ಯಂತ ಗಮನಾರ್ಹ ವಿಷಯವಾಗಿದೆ. ಕಳೆದ ಆರು ದಶಕಗಳಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಹಿಮಾಲಯನ್ ರಾಜ್ಯಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈ ರಾಜ್ಯಗಳು ಅತ್ಯಂತ ಕಠಿಣವಾದ ಭೂಪ್ರದೇಶವನ್ನು ಹೊಂದಿರುವ ಕಾರಣ ಮತ್ತು ಸುದೀರ್ಘ ತಿಂಗಳುಗಳ ಕಾಲ ಹಿಮಪಾತವನ್ನು ಅನುಭವಿಸುವ ಕಾರಣ ಇಲ್ಲಿ ಮೂಲಸೌಕರ್ಯ ಅಭಿವೃದ್ಧಿ ಅತ್ಯಂತ ಕಠಿಣವಾಗಿದೆ. ಆದರೆ ಕಾರ್ಯತಂತ್ರದ ಭದ್ರತೆ ಮತ್ತು ಅಲ್ಲಿ ವಾಸಿಸುವ ಜನರ ಕಲ್ಯಾಣಕ್ಕೆ ಈ ಪ್ರದೇಶಗಳಿಗೆ ಕನೆಕ್ಟಿವಿಟಿ ಅತ್ಯಂತ ಮುಖ್ಯವಾಗಿದೆ. ಎಂಟು ಈಶಾನ್ಯ ರಾಜ್ಯಗಳನ್ನು ಮತ್ತು ಲಡಾಖ್ ಪ್ರದೇಶವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸಲು ಮೋದಿ ಸರ್ಕಾರವು ಮಹತ್ತರ ಪ್ರಯತ್ನಗಳನ್ನು ಮಾಡಿದೆ. ದಶಕಗಳಿಂದ ಬಾಕಿ ಉಳಿದಿದ್ದ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಮೂರು ಸೇತುವೆಗಳ ನಿರ್ಮಾಣ ಕಾರ್ಯವು ಮೋದಿ ಅವಧಿಯಲ್ಲಿ ಸಂಪೂರ್ಣಗೊಂಡು ಜನರ ಬಳಕೆಗಾಗಿ ತೆರೆಯಿತು. ಪ್ರತಿ ರಾಜ್ಯಗಳ ರಾಜಧಾನಿಯನ್ನು ಸಂಪರ್ಕಿಸಲು ರೈಲ್ವೆ ಮಾರ್ಗ ಮತ್ತು ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹಿಂದೆ, ಈಶಾನ್ಯ ಭಾಗದ ಎರಡು ರಾಜ್ಯಗಳ ರಾಜಧಾನಿಗಳಷ್ಟೇ ರೈಲ್ವೇ ಮಾರ್ಗದೊಂದಿಗೆ ಸಂಪರ್ಕಗೊಂಡಿತ್ತು.
ಲಡಾಖ್ ಪ್ರದೇಶದಲ್ಲಿ, ಎಲ್ಲಾ ಹವಾಮಾನದಲ್ಲೂ ಕಾರ್ಯಾಚರಿಸುವಂತಹ ರೈಲ್ವೆ ಮಾರ್ಗವನ್ನು ನಿರ್ಮಾಣ ಮಾಡಲಾಯಿತು. 434 ಕಿ.ಮೀ ಉದ್ದದ ಶ್ರೀನಗರ-ಲೆಹ್ ರಾಷ್ಟ್ರೀಯ ಹೆದ್ದಾರಿಯು ಮುಚ್ಚಲ್ಪಡುವುದರಿಂದ ಈ ಪ್ರದೇಶವು ಚಳಿಗಾಲದ ಅವಧಿಯಲ್ಲಿ ಆರು ತಿಂಗಳುಗಳ ಕಾಲ ದೇಶದ ಇತರ ಭಾಗದೊಂದಿಗೆ ಸಂಪೂರ್ಣ ಸಂಪರ್ಕವನ್ನು ಕಳೆದುಕೊಳ್ಳುತ್ತಿತ್ತು. ಇದೀಗ ಅಲ್ಲಿ ಎಲ್ಲಾ ಹವಮಾನದ ರೈಲ್ವೇ ಲೈನ್ ನಿರ್ಮಾಣ ಮಾಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, “ಹಿಮಾಚಲ ಪ್ರದೇಶದಿಂದ ಲೇಹ್ ವರೆಗೆ ಎಲ್ಲಾ ಹವಮಾನದ ರೈಲ್ವೆ ಮಾರ್ಗ ಸ್ಥಾಪಿಸುವ ವಿಸ್ತೃತ ಯೋಜನೆಯ ಕೆಲಸ ಪ್ರಾರಂಭವಾಗಿದೆ. ಈ ಯೋಜನೆ ಒಮ್ಮೆ ಪೂರ್ಣಗೊಂಡ ಬಳಿಕ ಈ ರೈಲ್ವೆ ಮಾರ್ಗವು, ಪ್ರಸ್ತುತ ಬೇಸಿಗೆಯಲ್ಲಿ ಮಾತ್ರ ತೆರೆದಿರುವ ಕಾರ್ಗಿಲ್ ಮೂಲಕದ ರಸ್ತೆಯನ್ನೇ ಅವಲಂಬಿಸಿರುವ ಪ್ರದೇಶಕ್ಕೆ ಎಲ್ಲಾ ಹವಾಮಾನದ ಸಂಪರ್ಕವನ್ನು ಒದಗಿಸುತ್ತದೆ ” ಎಂದಿದ್ದಾರೆ.
ಮೋದಿ ಸರಕಾರದಲ್ಲಿ ರಕ್ಷಣಾ ಸಚಿವೆಯಾಗಿ 2017 ರ ಸೆಪ್ಟೆಂಬರ್ನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಅವರು, ನಾಲ್ಕು ಬಾರಿ ಲಡಾಖ್ಗೆ ತೆರಳಿ ಆ ಪ್ರದೇಶದ ಅಭಿವೃದ್ಧಿಯ ಯೋಜನೆಗಳ ವೇಗವನ್ನು ಪರಿಶೀಲನೆಗೊಳಪಡಿಸಿದ್ದಾರೆ. “ಈ ಹಿಮಾಲಯನ್ ರಾಜ್ಯಗಳು ಮೊದಲ ಬಾರಿಗೆ, ಹೊಸ ರೈಲ್ವೆ ಮಾರ್ಗಗಳು, ಉತ್ತಮ ರಸ್ತೆಗಳು ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣಗಳ ಮೂಲಕ ಅಭಿವೃದ್ಧಿಯನ್ನು ಕಾಣುತ್ತಿವೆ ” ಎಂಬುದಾಗಿ ಸೀತರಾಮನ್ ಹೇಳಿದ್ದಾರೆ. “ಅಭಿವೃದ್ಧಿ ಕಾರ್ಯಗಳಲ್ಲಿನ ವಿಳಂಬವನ್ನು ತಪ್ಪಿಸುವ ಸಲುವಾಗಿ ಅನುದಾನಗಳನ್ನು ಶ್ರೀನಗರದ ಪ್ರಧಾನ ಕಛೇರಿಗೆ ನೀಡುವ ಬದಲಾಗಿ, ನೇರವಾಗಿ ಲಡಾಖ್ ಕೌನ್ಸಿಲ್ಗೆ ನೀಡಲಾಗಿದೆ. ಹಣವನ್ನು ಬಳಸಿಕೊಳ್ಳಲು ಲೇಹ್ಗೆ ಹೆಚ್ಚಿನ ಆಡಳಿತಾತ್ಮಕ ಮತ್ತು ಹಣಕಾಸಿನ ಅಧಿಕಾರವನ್ನು ನೀಡಲಾಗಿದೆ, ಇದು ವಿವಿಧ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸಿದೆ” ಎಂದಿದ್ದಾರೆ.
ಭಾರತ-ಚೀನಾ ಗಡಿ ಮತ್ತು ಪಾಕಿಸ್ತಾನದ ಗಡಿ ಪ್ರದೇಶಗಳ 21 ಕಿ.ಮೀ. ಅಕ್ಷೀಯ ಮತ್ತು ಪಾರ್ಶ್ವದ ರಸ್ತೆಗಳ ಜೊತೆಗೆ 44 ‘ಕಾರ್ಯತಾಂತ್ರಿಕ ಪ್ರಾಮುಖ್ಯತೆ’ವುಳ್ಳ ರಸ್ತೆಗಳನ್ನು ಮೋದಿ ಸರಕಾರ ನಿರ್ಮಾಣ ಮಾಡಲಿದೆ ಎಂದು ಕೆಲವು ತಿಂಗಳ ಹಿಂದೆ ಘೋಷಿಸಲಾಗಿದೆ. ಗಡಿಯಾದ್ಯಂತ ಸೇನಾ ಪಡೆಗಳನ್ನು ಶೀಘ್ರವಾಗಿ ಜಮಾಯಿಸಲು ಸಾಧ್ಯವಾಗುವಂತಹ 44 ಕಾರ್ಯತಾಂತ್ರಿಕ ಪ್ರಮುಖ್ಯತೆಯ ರಸ್ತೆಗಳನ್ನು ನಿರ್ಮಿಸಲು ಕೇಂದ್ರೀಯ ಸಾರ್ವಜನಿಕ ಕಾರ್ಯ ಇಲಾಖೆ(ಸಿಪಿಡಬ್ಲ್ಯೂಡಿ)ಗೆ ಸೂಚನೆಯನ್ನು ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶಕ್ಕೆ 4,000 ಕಿ.ಮೀ ಉದ್ದದ ವಾಸ್ತವ ನಿಯಂತ್ರಣ (ಎಲ್ಎಸಿ) ಸ್ಟ್ರೆಚ್ ಅನ್ನು ವಿಸ್ತರಿಸಲು ಯೋಜಿಸಲಾಗಿದೆ. “ಸಿಪಿಡಬ್ಲ್ಯೂಡಿಯು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ 5 ರಾಜ್ಯಗಳನ್ನು ವ್ಯಾಪಿಸಿರುವ ಇಂಡೋ-ಚೀನಾ ಗಡಿಯುದ್ದಕ್ಕೂ 44 ಕಾರ್ಯತಾಂತ್ರಿಕ ಪ್ರಾಮುಖ್ಯತೆಯ ರಸ್ತೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ” ಎಂದು ಸಿಪಿಡಬ್ಲ್ಯೂಡಿ ವಾರ್ಷಿಕ ವರದಿ ಹೇಳಿದೆ.
ಘನ ಮೂಲಸೌಕರ್ಯವನ್ನು ಹೊಂದಿದ್ದರೆ ಮಾತ್ರ ಚೀನಾಕ್ಕೆ ಭಾರತವು ಸೂಕ್ತ ಉತ್ತರವನ್ನು ನೀಡಬಲ್ಲದು, ಸೇನಾಪಡೆಗಳನ್ನು ತ್ವರಿತವಾಗಿ ಜಮಾಯಿಸಿ ಬಲಿಷ್ಠ ಚೀನಾಕ್ಕೆ ತಕ್ಕ ತಿರುಗೇಟನ್ನು ನೀಡಬಲ್ಲದು. ಈ ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯವು ನಾಗರಿಕ ದೃಷ್ಟಿಕೋನದಿಂದ ಕೂಡ ಅತ್ಯಂತ ಮುಖ್ಯವಾಗಿದೆ. ಯಾಕೆಂದರೆ ಇದು ಈ ಪ್ರದೇಶಗಳಲ್ಲಿ ಜನರ ಜೀವನವನ್ನು ತುಸು ಸರಳಗೊಳಿಸುತ್ತದೆ. ಗಡಿ ಪ್ರದೇಶಗಳಲ್ಲಿನ ಜನರು ತುಂಬಾ ಕಷ್ಟದ ಸನ್ನಿವೇಶಗಳಲ್ಲಿ ವಾಸಿಸುತ್ತಾರೆ. ಆದ್ದರಿಂದ, ಸರ್ಕಾರ ಇಲ್ಲಿ ಹೂಡಿಕೆಗಳನ್ನು ಮಾಡುವುದು ಅತೀ ಮುಖ್ಯವಾಗುತ್ತದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಿಂದ ಪ್ರದೇಶದ ಪ್ರವಾಸೋದ್ಯಮಗಳೂ ಬೆಳೆಯುತ್ತದೆ, ಇದರಿಂದ ಈ ಭಾಗದಲ್ಲಿ ವಾಸಿಸುತ್ತಿರುವ ಜನರ ಬದುಕಿನಲ್ಲಿ ಆರ್ಥಿಕ ಸಮೃದ್ಧಿಯೂ ಆಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.