×
Home About Us Advertise With s Contact Us

ರೂ. 30,000 ಕೋಟಿ ಸುಳ್ಳಿನ ಬಗ್ಗೆ ಕೊನೆಗೂ ರಾಹುಲ್­ರನ್ನು ಪ್ರಶ್ನೆ ಮಾಡಿದ ಮಾಧ್ಯಮ

ನವದೆಹಲಿ: ಮುಖ್ಯವಾಹಿನಿಯ ಮಾಧ್ಯಮಗಳು ಕೊನೆಗೂ ಎಚ್ಚೆತ್ತುಕೊಂಡಿವೆ, ಅನಿಲ್ ಅಂಬಾನಿ ಅವರಿಗೆ ನರೇಂದ್ರ ಮೋದಿ ರೂ. 30 ಸಾವಿರ ಕೋಟಿ ನೀಡಿದ್ದಾರೆ ಎಂಬ ರಾಹುಲ್ ಗಾಂಧಿ ಅವರ ಸುಳ್ಳು ಹೇಳಿಕೆಯನ್ನು ಪ್ರಶ್ನೆ ಮಾಡಿದೆ. ಇಂಡಿಯನ್ ಎಕ್ಸ್­ಪ್ರೆಸ್­ಗೆ ನೀಡಿದ ಸಂದರ್ಶನದಲ್ಲಿ ತನ್ನ ಸುಳ್ಳು ಹೇಳಿಕೆಗೆ ನಿಖರವಾದ ಸ್ಪಷ್ಟನೆ ನೀಡಲಾಗದೆ ಅವರು ಪೇಚಿಗೆ ಸಿಲುಕಿಕೊಂಡಿದ್ದಾರೆ.

ರಫೆಲ್ ಒಪ್ಪಂದದ ಒಟ್ಟು ಮೊತ್ತ 60 ಸಾವಿರ ಕೋಟಿ ರೂಪಾಯಿ ಎಂದು ದಾಖಲೆಗಳು ಹೇಳುತ್ತಿವೆ, ಆದರೆ ನೀವು ಮೋದಿಯವರು ಅನಿಲ್ ಅಂಬಾನಿ ಅವರಿಗೇ ರೂ. 30,000 ಕೋಟಿ ನೀಡಿದ್ದಾರೆ ಎಂದು ಹೇಳುತ್ತಿದ್ದೀರಲ್ಲ ಎಂದು ಇಂಡಿಯನ್ ಎಕ್ಸ್­ಪ್ರೆಸ್ ರಾಹುಲ್ ಅವರನ್ನು ಪ್ರಶ್ನಿಸಿದೆ. ಆದರೆ ಈ ಪ್ರಶ್ನೆಯನ್ನು ಅರ್ಧದಲ್ಲೇ ನಿಲ್ಲಿಸಿ ಪ್ರತಿಕ್ರಿಯೆ ನೀಡಿದ ರಾಹುಲ್, ಅನಿಲ್ ಅಂಬಾನಿ ಅವರಿಗೆ ಅಫ್ಸೆಟ್ ಕಾಂಟ್ರ್ಯಾಕ್ಟ್ ಮತ್ತು ಇತರ ರಫೆಲ್ ಪ್ರಕ್ರಿಯೆಗಳ ಮೂಲಕ ರೂ. 30,000 ಕೋಟಿಯಷ್ಟು ಅನುಕೂಲ ಮಾಡಿಕೊಡಲಾಗಿದೆ ಎಂದು ದಾಖಲೆಯಿಂದ ಕಂಡು ಬರುತ್ತದೆ ಎಂದಿದ್ದಾರೆ.

ಅಫ್ಸೆಟ್ ರೂ. 30 ಸಾವಿರ ಕೋಟಿಯಷ್ಟು ಆಗುವುದಿಲ್ಲವಲ್ಲವೇ ಎಂದು ಇಂಡಿಯನ್ ಎಕ್ಸ್­ಪ್ರೆಸ್ ಪ್ರಶ್ನಿಸಿದಾಗ, ರಾಹುಲ್ ತಮ್ಮ ಗುರಿಯನ್ನು ಬದಲಾಯಿಸಿ, ಅನಿಲ್ ಅಂಬಾನಿ ಅವರಿಗೆ ಯಾವ ಪ್ರಕ್ರಿಯೆ ಮೂಲಕ ಡೀಲ್ ನೀಡಲಾಯಿತು ಎಂಬುದನ್ನು ಇದು ಆಧರಿಸಿದೆ ಎಂದಿದ್ದಾರೆ.

ಆದರೆ ರೂ. 30 ಸಾವಿರ ಕೋಟಿ ಬಗೆಗಿನ ವಿವರವನ್ನು ಕೇಳಿದಾಗ ರಾಹುಲ್ ಯಾವುದೇ ಸ್ಪಷ್ಟ ಉತ್ತರವನ್ನು ನೀಡದೆ ತಪ್ಪಿಸಿಕೊಂಡರು. ಅಲ್ಲದೇ, ಈ ಬಗ್ಗೆ ನಾವು ಲೆಕ್ಕಾಚಾರ ಹಾಕಿದ್ದೇವೆ, ಇಂಡಿಯನ್ ಎಕ್ಸ್­ಪ್ರೆಸ್­ಗೆ ಮಾಹಿತಿ ಬೇಕಾಗಿದ್ದರೆ ಪಿ. ಚಿದಂಬರಂ ಮತ್ತು ಸುರ್ಜೇವಾಲಾ ಅವರನ್ನು ಸಂಪರ್ಕಿಸಿ ಕೊಡುವುದಾಗಿ ಹೇಳಿದ್ದಾರೆ.

ಒಟ್ಟಾರೆಯಾಗಿ ಸುಳ್ಳು ಹೇಳಿರುವ ರಾಹುಲ್ ತಮ್ಮ ಸುಳ್ಳನ್ನು ಸಾಬೀತುಪಡಿಸಲು ಇಲ್ಲಸಲ್ಲದ ಪೇಚಿಗೆ ಸಿಲುಕುತ್ತಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top
error: Content is protected !!