ನವದೆಹಲಿ: ದೇಶದ 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇದು ಐದನೇ ಹಂತದ ಚುನಾವಣೆಯಾಗಿದೆ. ಒಟ್ಟು 7 ಹಂತಗಳಲ್ಲಿ ಚುನಾವಣೆ ಜರುಗುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮುಂದುವರೆಯಲಿದೆ.
ಕೇಂದ್ರ ಸಚಿವರುಗಳಾದ ರಾಜನಾಥ ಸಿಂಗ್ ಅವರು ಲಕ್ನೋದಲ್ಲಿ ಮತ್ತು ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಜೈಪುರದಲ್ಲಿ ತಮ್ಮ ಮತವನ್ನು ಹಾಕಿದ್ದಾರೆ.
ಉತ್ತರಪ್ರದೇಶದ 14, ರಾಜಸ್ಥಾನದ 12, ಮಧ್ಯಪ್ರದೇಶ ಮತ್ತು ಪಶ್ಚಿಮಬಂಗಾಳದ ತಲಾ 7 ಕ್ಷೇತ್ರಗಳಿಗೆ ಬಿಹಾರದ 5 ಕ್ಷೇತ್ರಗಳಿಗೆ, ಜಾರ್ಖಾಂಡಿನ 4 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಜಮ್ಮು ಕಾಶ್ಮೀರದ ಶೋಪಿಯಾನ ಮತ್ತು ಪುಲ್ವಾಮ ಜಿಲ್ಲೆಗಳ ಲಡಾಖ್ ಲೋಕಸಭಾ ಕ್ಷೇತ್ರ ಮತ್ತು ಅನಂತ್ನಾಗ್ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಜರುಗುತ್ತಿದೆ.
ಪ್ರತಿಷ್ಠಿತ ವ್ಯಕ್ತಿಗಳಾದ ರಾಜನಾಥ ಸಿಂಗ್, ಸ್ಮೃತಿ ಇರಾನಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಜ್ಯವರ್ಧನ್ ಸಿಂಗ್ ರಾಥೋಡ್, ಜಯಂತ್ ಸಿನ್ಹಾ, ರಾಜೀವ್ ಪ್ರತಾಪ್ ರೂಢಿ ಮುಂತಾದವರು ಚುನಾವಣಾ ಕಣದಲ್ಲಿದ್ದಾರೆ.
ರಾಜಕೀಯವಾಗಿ ಅತ್ಯಂತ ಮಹತ್ವಪೂರ್ಣವಾಗಿರುವ ಉತ್ತರಪ್ರದೇಶದಲ್ಲಿ 182 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರ ಪೈಕಿ 26 ಮಹಿಳೆಯರಾಗಿದ್ದಾರೆ. ಇನ್ನು ಬಿಹಾರದಲ್ಲಿ 82 ಮಂದಿ ಚುನಾವಣಾ ಕಣದಲ್ಲಿದ್ದು, 6 ಮಂದಿ ಮಹಿಳೆಯರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.