ನವದೆಹಲಿ: ಅಮೆರಿಕ-ಭಾರತ ಸಂಬಂಧ ಹಳಸಲು ಕಾರಣವಾಗಿದ್ದ ರಾಯಭಾರ ಅಧಿಕಾರಿ ದೇವಯಾನಿ ಕೋಬ್ರಗಡೆ ಪ್ರಕರಣದಂತದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.
ನ್ಯೂಜಿಲ್ಯಾಂಡ್ನಲ್ಲಿರುವ ಭಾರತದ ಹೈಕಮಿಷನರ್ ರವಿ ಥಾಪರ್ ಅವರ ಪತ್ನಿ ವಿರುದ್ಧ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಇದರಿಂದಾಗಿ ರವಿ ಅವರು ನ್ಯೂಜಿಲ್ಯಾಂಡ್ ಬಿಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಈ ಬೆಳವಣಿಗೆಯನ್ನು ದೃಢ ಪಡಿಸಿದ್ದು, ಥಾಪರ್ ಅವರು ಹೆಡ್ಕ್ವಾಟರ್ಗೆ ವರ್ಗಾವಣೆಗೊಳ್ಳಲಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಪ್ರಕಟನೆ ಹೊರಡಿಸಲಿದ್ದಾರೆ ಎಂದಿದ್ದಾರೆ.
ಥಾಪರ್ ಅವರ ಪತ್ನಿ ಉರ್ಮಿಳಾ ಥಾಪರ್ ಅವರು ರಾಯಭಾರ ಕಛೇರಿ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ, ಈ ಬಗ್ಗೆ ಅಧಿಕೃತ ಪ್ರಕರಣ ಇನ್ನೂ ದಾಖಲಾಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
೨೦೧೩ರಲ್ಲಿ ದೇವಯಾನಿ ಕೋಬ್ರಗಡೆ ಅವರು ತಮ್ಮ ಕೆಲಸದಾಳುವನ್ನು ಹೀನಾಯವಾಗಿ ನಡೆಸಿಕೊಂಡದ್ದಕ್ಕಾಗಿ ಅಮೆರಿಕಾದಲ್ಲಿ ಬಂಧನಕ್ಕೀಡಾಗಿದ್ದರು, ಇದು ವಿದೇಶಾಂಗ ಸಚಿವಾಲಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.