ನವದೆಹಲಿ : ಭಾರತೀಯ ನೌಕಾಸೇನೆಯ ನಾಲ್ಕನೇ ಸ್ಕಾರ್ಪಿನ್ ಸಬ್ಮರೀನ್ INS ವೇಲಾ ಮೇ. 6 ರಂದು ಕಾರ್ಯಾರಂಭ ಮಾಡಲು ಸಂಪೂರ್ಣ ಸಜ್ಜಾಗಿದೆ.
ಮಜಗೊನ್ ಡಾಕ್ ಲಿಮಿಟೆಡ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ INS ವೇಲಾದ ಔಟ್ ಫಿಟಿಂಗ್ ಈಗಾಗಲೇ ಸಂಪೂರ್ಣಗೊಂಡಿದ್ದು, ಮೇ. 6 ರಂದು ಸಮುದ್ರವನ್ನು ಸ್ಪರ್ಶಿಸಲು ಸಜ್ಜಾಗಿದೆ.
ತನ್ನ ಅಂಡರ್ ವಾಟರ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತವು 2006ರಲ್ಲಿ 6 ಸಬ್ಮರೀನ್ಗಳನ್ನು ನಿರ್ಮಾಣ ಮಾಡಲು ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಫ್ರಾನ್ಸ್ ಸಂಸ್ಥೆ ಡಿಸಿಎನ್ಎಸ್ ಮತ್ತು ಮಜಗೊನ್ ಡಾಕ್ ಲಿಮಿಟೆಡ್ನೊಂದಿಗೆ ಜಂಟಿ ಒಪ್ಪಂದವನ್ನು ಮಾಡಿಕೊಂಡು, $3 ಬಿಲಿಯನ್ ಮೊತ್ತದಲ್ಲಿ ಪ್ರಾಜೆಕ್ಟ್-75 ಅಡಿಯಲ್ಲಿ ಈ ಸಬ್ಮರೀನ್ಗಳನ್ನು ನಿರ್ಮಾಣ ಮಾಡುತ್ತಿದೆ.
ಈಗಾಗಲೇ ಐಎನ್ಎಸ್ ಕಲವೆರಿ, ಐಎನ್ಎಸ್ ಖಾಂದೇರಿ, ಐಎನ್ಎಸ್ ಕಾರಂಜ್ ಈಗಾಗಲೇ ಕಾರ್ಯಾರಂಭಕ್ಕೆ ಸಿದ್ಧಗೊಂಡಿದೆ. ಐಎನ್ಎಸ್ ವಗಿರ್ ಮತ್ತು ಐಎನ್ಎಸ್ ವಾಗ್ಶೀರ್ ನಿರ್ಮಾಣ ಹಂತದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.