ನವದೆಹಲಿ : ಸಿಐಎ ಮಾಜಿ ನಿರ್ದೇಶಕ ಮೈಕೆಲ್ ಮೊರೆಲ್ ಅವರು ಪಾಕಿಸ್ತಾನದ ನಿಜಮುಖವನ್ನು ಜಗತ್ತಿನ ಮುಂದೆ ಬಹಿರಂಗ ಪಡಿಸಿದ್ದಾರೆ. ಏಷ್ಯಾ ಗ್ರೂಪ್ ನಡೆಸಿದ ‘The Tealeaves’ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವನ್ನು ಟಾರ್ಗೆಟ್ ಮಾಡುವ ಗೀಳು ಅಂಟಿಸಿಕೊಂಡಿರುವ ಪಾಕಿಸ್ತಾನ ಹೇಗೆ ಭಯೋತ್ಪಾದನೆಯನ್ನು ಅಸ್ತ್ರ ಮಾಡಿಕೊಳ್ಳುತ್ತಿದೆ ಎಂಬುದನ್ನು ವಿವರಿಸಿದ್ದಾರೆ.
ಪಾಕಿಸ್ತಾನವನ್ನು ಜಗತ್ತಿನ ಅತ್ಯಂತ ಅಪಾಯಕಾರಿ ಎಂದು ಬಣ್ಣಿಸಿರುವ ಅವರು, ಆ ದೇಶ ಜಗತ್ತಿಗೆ ಭಯೋತ್ಪಾದನೆಯನ್ನು ಪೂರೈಕೆ ಮಾಡುತ್ತಿದೆ ಮತ್ತು ತಾನೇ ಭಯೋತ್ಪಾದನೆಯ ಸಂತ್ರಸ್ತ ಎಂಬಂತೆ ಜಗತ್ತಿನ ಮುಂದೆ ನಿಂತು ನಾಟಕ ಮಾಡುತ್ತಿದೆ ಎಂದಿದ್ದಾರೆ.
ಪಾಕಿಸ್ತಾನವು ಭಾರತದ ಬಗ್ಗೆ ಗೀಳನ್ನು ಹತ್ತಿಸಿಕೊಂಡಿದ್ದು, ಭಾರತವನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದಲೇ ಭಯೋತ್ಪಾದನೆಯ ಸಂಘಟನೆಗಳನ್ನು ಸೃಷ್ಟಿ ಮಾಡಿದೆ. ಇಂದಿಗೂ ಆ ಭಯೋತ್ಪಾದನಾ ಸಂಘಟನೆಗಳು ವಿಶ್ವಕ್ಕೆ ಅತಿ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ ಎಂದಿದ್ದಾರೆ.
ಭಾರತ ಈಗ ತನ್ನ ನೆರೆಯ ಪಾಕಿಸ್ತಾನದ ಬಗ್ಗೆ ಗಮನವನ್ನು ಕೇಂದ್ರೀಕರಿಸುವ ಬದಲು ತನ್ನ ಆರ್ಥಿಕತೆ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಿದೆ. ಆದರೆ ಆ ಇಸ್ಲಾಮಿಕ್ ರಾಷ್ಟ್ರ ಈಗಲೂ ಭಯೋತ್ಪಾದನೆಯನ್ನು ಭಾರತದ ವಿರುದ್ಧ ಮಾತ್ರವಲ್ಲದೆ ಅಫಘಾನಿಸ್ತಾನದ ವಿರುದ್ಧವೂ ಬಳಸುವುದನ್ನು ಮುಂದುವರೆಸಿದೆ. ಅಫಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವದ ಬಗ್ಗೆ ಆ ರಾಷ್ಟ್ರ ಕಳವಳಗೊಂಡಿದೆ ಎಂದಿದ್ದಾರೆ.
ಪಾಕಿಸ್ತಾನದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದ್ದು, ಅಲ್ಲಿನ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ, ಶಿಕ್ಷಣ ವ್ಯವಸ್ಥೆ ಬಹುತೇಕ ಬಿದ್ದುಹೋಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.