ಉಡುಪಿ: ನಾಲ್ಕೂವರೆ ತಿಂಗಳುಗಳ ಬಳಿಕ ಸುವರ್ಣ ತ್ರಿಭುಜ ಮೀನುಗಾರಿಕಾ ದೋಣಿ ಮತ್ತು ಅದರಲ್ಲಿದ್ದ 7 ಮೀನುಗಾರರ ನಿಗೂಢ ನಾಪತ್ತೆ ಪ್ರಕರಣದ ಸತ್ಯಾಸತ್ಯತೆ ಬಯಲುಗೊಂಡಿದೆ. ಈ ದೋಣಿಯ ಅವಶೇಷಗಳು ಮಹಾರಾಷ್ಟ್ರದ ಮಲ್ವಾನ್ನಲ್ಲಿ ಪತ್ತೆಯಾಗಿದೆ. ಇದರಲ್ಲಿದ್ದವರು ಸಮುದ್ರದದಲ್ಲಿ ಮುಳುಗಿ ಸಾವಿಗೀಡಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಘೋಷಣೆ ಮಾಡಲಾಗಿದೆ.
ಮಾಲ್ವಾನ್ ಕಡಲ ತೀರದಿಂದ 33 ಕಿ.ಮೀ ದೂರ ಕಡಲಿನಲ್ಲಿ ಸುವರ್ಣ ತ್ರಿಭುಜ ಬೋಟ್ನ ಅವಶೇಷಗಳು ಪತ್ತೆಯಾಗಿವೆ ಎಂದು ಭಾರತೀಯ ನೌಕಾಸೇನೆ ಮೂಲಗಳು ತಿಳಿಸಿವೆ.
ನೌಕಾಪಡೆಯ ‘ಐಎನ್ಎಸ್ ನಿರೀಕ್ಷಕ’ ನೌಕೆಯು, ಸುವರ್ಣ ತ್ರಿಭುಜ ಮೀನುಗಾರಿಕೆ ದೋಣಿಯ ಶೋಧ ಕಾರ್ಯದಲ್ಲಿ ಏ.28ರಿಂದ ತೊಡಗಿಕೊಂಡಿದೆ. ಕಾರ್ಯಾಚರಣೆಗೆ ಮೀನುಗಾರರು ಸಾಥ್ ನೀಡಿದ್ದಾರೆ. ಸೋನಾರ್ ತಂತ್ರಜ್ಞಾನದ ಮೂಲಕ ಬೋಟ್ ಇರುವುದನ್ನು ಗುರುತಿಸಿದ ಮುಳುಗು ತಜ್ಞರು, ಸಮುದ್ರದಲ್ಲಿ ಇಳಿದು 60 ಮೀಟರ್ ಆಳದಲ್ಲಿ ಬೋಟ್ ಇರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಭಾರತೀಯ ನೌಕಾಸೇನೆ ಗುರುವಾರ ಟ್ವೀಟ್ ಮಾಡಿದೆ.
ಮಲ್ಪೆ ಬಂದರಿನಿಂದ ಡಿ. 13ರಂದು ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. 15ರ ರಾತ್ರಿ ಇತರ ಬೋಟ್ಗಳ ಜೊತೆ ಸಂಪರ್ಕ ಕಳೆದುಕೊಂಡಿತ್ತು.
ಮಾಲ್ವನ್ ಸಮೀಪ ಈ ದೋಣಿ ಮುಳುಗಡೆಯಾಗಿ, ಮೀನುಗಾರರು ಸಾವಿಗೀಡಾಗಿರಬಹುದು ಎಂದು ಹೇಳಲಾಗುತ್ತಿದೆ.
ಶಾಸಕ ರಘುಪತಿ ಭಟ್ ಅವರು, ”ಮೀನುಗಾರರು ಬದುಕುಳಿದಿರುವ ಯಾವುದೇ ಅವಕಾಶಗಳಿಲ್ಲ. 7 ಮಂದಿಯ ಮನೆಯವರಿಗೂ ದೊಡ್ಡ ಮೊತ್ತದ ಪರಿಹಾರ ನೀಡುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡುತ್ತೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.