ನವದೆಹಲಿ: ಸೃಜನಶೀಲತೆ, ಪ್ರತಿಭೆಯ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಮೆಚ್ಚುಗೆಯನ್ನು ಗಿಟ್ಟಿಸಿಕೊಳ್ಳುತ್ತಿವೆ. ಇಂತಹ ವೀಡಿಯೋಗಳ ಸಾಲಿಗೆ ಹೊಸ ಸೇರ್ಪಡೆಯೆಂದರೆ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ರ್ಯಾಪ್ ಹಾಡುತ್ತಿರುವ ಬಾಲಕ.
ನಟ ರಣವೀರ್ ಸಿಂಗ್ ನಟನೆಯ ‘ಗಲ್ಲಿ ಬಾಯ್’ ಸಿನಿಮಾದ ಪ್ರಸಿದ್ಧ ‘ಅಪ್ನಾ ಟೈಮ್ ಆಯೇಗಾ’ ಹಾಡನ್ನು ‘ಮೋದಿ ಫಿರ್ ಆಯೇಗಾ’ ಎಂದು ಬದಲಿಸಿ ಈ ಬಾಲಕ ರ್ಯಾಪ್ ಹಾಡಿದ್ದಾನೆ, ಎಪ್ರಿಲ್ 29ರಂದು ಚೌಕಿದಾರ್ ಸ್ಕ್ವ್ಯುಂಟಿ ಎಂಬುವವರು ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಾಲಕ ಯಾರು ಎಂಬುದು ಮಾತ್ರ ಇನ್ನೂ ತಿಳಿದು ಬಂದಿಲ್ಲ. ಶೀಘ್ರದಲ್ಲೇ ಈ ಬಾಲಕನನ್ನು ಟ್ವಿಟಿರಿಗರು ಕಂಡು ಹಿಡಿಯುವುದರಲ್ಲಿ ಅನುಮಾನವಿಲ್ಲ.
ಈ ಬಾಲಕನ ವೀಡಿಯೋ ಈಗಾಗಲೇ 105,000 ವ್ಯೂವ್, 15000 ಲೈಕ್ ಪಡೆದುಕೊಂಡಿದೆ. ಎಲ್ಲರೂ ಈ ಬಾಲಕನ ಪ್ರತಿಭೆಯನ್ನು ಕೊಂಡಾಡಿದ್ದಾರೆ.
Who this kid? Lets make him Famous😍😍😍😍#AayegaToModiHi pic.twitter.com/510pVuw8qQ
— Chowkidar Squinty🌈 (@squintneon) April 30, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.