ನವದೆಹಲಿ : ಭಾರತದ ಶೂಟಿಂಗ್ ತಾರೆ ಅಪೂರ್ವಿ ಚಂಡೇಲಾ ಅವರು ಮಹಿಳೆಯರ 100 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ವಿಶ್ವ ನಂಬರ್.1 ಪಟ್ಟಕ್ಕೆ ಏರಿದ್ದಾರೆ. ಮತ್ತೋರ್ವ ಶೂಟರ್ ಅಂಜುಮ್ ಮುಡ್ಗಿಲ್ ಅವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಇವರುಗಳು ತೋರಿಸಿದ ಅತ್ಯುತ್ತಮ ಪ್ರದರ್ಶನದ ಫಲವಾಗಿ ನಂಬರ್.1 ಮತ್ತು ನಂಬರ್.2 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. 2020 ರ ಒಲಿಂಪಿಕ್ ಗೆ ಆಯ್ಕೆಯಾದ ಭಾರತೀಯರ ಪೈಕಿ ಇವರುಗಳು ಸೇರಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ನಡೆದ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ವರ್ಲ್ಡ್ ಕಪ್ ನಲ್ಲಿ ಚಾಂಡೇಲಾ ಅವರು 252.9 ಸ್ಕೋರ್ ಪಡೆಯುವ ಮೂಲಕ ವಿಶ್ವದಾಖಲೆಯನ್ನು ಮಾಡಿದ್ದರು, 2014ರ ಗ್ಲಾಸ್ಕೋ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಇವರು ಬಂಗಾರ ಪಡೆದುಕೊಂಡಿದ್ದಾರೆ ಮತ್ತು ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. 2018ರ ಏಷ್ಯನ್ ಗೇಮ್ಸ್ ನಲ್ಲಿ ಚಾಂಡೇಲಾ ಅವರು 100 ಮೀಟರ್ ಮಿಕ್ಸ್ಡ್ ರೈಫಲ್ ಇವೆಂಟ್ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ.
ಭಾರತದ ಮತ್ತೋರ್ವ ಶೂಟರ್ ಮನು ಬಕೇರ್ ಅವರು 25 ಮೀಟರ್ ಪಿಸ್ತೂಲ್ ಮಹಿಳಾ ವಿಭಾಗದಲ್ಲಿ 10ನೆೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.