ಬೆಂಗಳೂರು : ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಜುಲೈ 9 – ಜುಲೈ 16 ರ ನಡುವೆ ನಡೆಯುವ ನಿರೀಕ್ಷೆ ಇದ್ದು, ಸೆಪ್ಟೆಂಬರ್ 6ರಂದು ಇದು ಚಂದ್ರನಲ್ಲಿ ಲ್ಯಾಂಡ್ ಆಗುವ ನಿರೀಕ್ಷೆ ಇದೆ.
ಚಂದ್ರಯಾನ-2 ಭಾರತಕ್ಕೆ ಮತ್ತೊಂದು ಮೈಲಿಗಲ್ಲಿಯ ಯೋಜನೆಯಾಗಿದ್ದು, ಜುಲೈನಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಬುಧವಾರ ಇಸ್ರೋ ಟ್ವಿಟರ್ ಮೂಲಕ ಘೋಷಣೆ ಮಾಡಿದೆ.
🇮🇳 #ISROMissions 🇮🇳
We are ready for one of the most exciting missions, #Chandrayaan2. Launch window between July 9-16 & likely Moon-landing on Sept 6, 2019. #GSLVMKIII will carry 3 modules of this #lunarmission – Orbiter, Lander (Vikram), Rover (Pragyan).
More updates soon. pic.twitter.com/jzx9CMwUhR
— ISRO (@isro) May 1, 2019
ಟ್ವೀಟ್ ಮಾಡಿರುವ ಇಸ್ರೋ “ಒಂದು ಮಹತ್ವದ ರೋಮಾಂಚನಕಾರಿ ಯೋಜನೆ ಚಂದ್ರಯಾನ-2 ಗೆ ನಾವು ಸಜ್ಜಾಗಿದ್ದೇವೆ. ಜುಲೈ 9 – 16 ನಡುವೆ ಲಾಂಚ್ ಮಾಡಲಾಗುತ್ತಿದ್ದು, ಸೆಪ್ಟೆಂಬರ್ 6ರಂದು ಚಂದ್ರನಲ್ಲಿ ಲ್ಯಾಂಡ್ ಆಗುವ ನಿರೀಕ್ಷೆಯಿದೆ. ಜಿಎಸ್ಎಲ್ವಿಎಂಕೆIII ಈ ಚಂದ್ರಯಾನ ಮಿಷನಿನ ಮೂರು ಮಾದರಿಗಳಾದ ಆರ್ಬಿಟರ್, ಲ್ಯಾಂಡರ್, ರೋವರ್ಗಳನ್ನು ಹೊತ್ತೊಯ್ಯಲಿದೆ” ಎಂದಿದೆ.
ಚಂದ್ರಯಾನ-1 ಭಾರತದ ಮೊದಲ ಚಂದ್ರಯಾನ ಯೋಜನೆಯಾಗಿತ್ತು, ಇದನ್ನು 2008ರ ಅಕ್ಟೋಬರ್ ನಲ್ಲಿ ಲಾಂಚ್ ಮಾಡಲಾಗಿತ್ತು. 2009ರವರೆಗೆ ಇದು ಕಾರ್ಯಾಚರಣೆಯಲ್ಲಿತ್ತು. ಇದೀಗ ಭಾರತ ಚಂದ್ರಯಾನ-2 ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಲು ಸಜ್ಜಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.