ನವದೆಹಲಿ: 8 ಆ್ಯಂಟಿ ಸಬ್ಮರೀನ್ ವಾರ್ಫೇರ್ ಶಲ್ಲೋ ವಾಟರ್ ಕ್ರಾಫ್ಟ್ಸ್ (ASWSWC)ಗಳನ್ನು ನಿರ್ಮಾಣ ಮಾಡುವ ಸಲುವಾಗಿ ಮಂಗಳವಾರ ರಕ್ಷಣಾ ಸಚಿವಾಲಯವು, ಸಾರ್ವಜನಿಕ ರಂಗದ ಶಿಪ್ಯಾರ್ಡ್ ಆದ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನೊಂದಿಗೆ ರೂ.6,311 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದಾಗಿ ಭಾರತೀಯ ನೌಕಾ ಸೇನೆಗೆ ಮಹತ್ವದ ಉತ್ತೇಜನ ದೊರಕಲಿದೆ.
ರಕ್ಷಣಾ ಸಚಿವಾಲಯವು ಇದೇ ರೀತಿಯ 8 ಹಡಗುಗಳ ನಿರ್ಮಾಣಕ್ಕಾಗಿ, ಕೋಲ್ಕತ್ತಾ ಮೂಲದ ಡಿಫೆನ್ಸ್ ಶಿಪ್ಯಾರ್ಡ್ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ & ಎಂಜಿನೀರ್ಸ್(GRSE)ನೊಂದಿಗೆ ಸೋಮವಾರ ಕಾಂಟ್ರ್ಯಾಕ್ಟ್ಗೆ ಸಹಿ ಮಾಡಿದೆ.
ಒಟ್ಟು 16 ಹಡಗುಗಳನ್ನು, ವಿತರಣಾ ಅವಧಿಯನ್ನು ಕಡಿಮೆಗೊಳಿಸಲುವ ಸಲುವಾಗಿ ಎರಡು ಶಿಪ್ಯಾರ್ಡ್ಗಳಲ್ಲಿ ಏಕಕಾಲದಲ್ಲಿ ನಿರ್ಮಿಸಲಾಗುತ್ತಿದೆ. ASWSWC ಗಳು ಅರಬ್ಬಿ ಸಮುದ್ರದಲ್ಲಿ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚುವ ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ASWSWC ಗಾಗಿ ಟೆಂಡರ್ 2014 ರ ಏಪ್ರಿಲ್ ತಿಂಗಳಲ್ಲಿ ನೀಡಲಾಯಿತು ಮತ್ತು ಒಪ್ಪಂದಕ್ಕೆ ಸಹಿ ಹಾಕಲು ರಕ್ಷಣಾ ಸಚಿವಾಲಯ ಐದು ವರ್ಷಗಳನ್ನು ತೆಗೆದುಕೊಂಡಿದೆ. ಒಪ್ಪಂದದ ಪ್ರಕಾರ, ಕಾಂಟ್ರ್ಯಾಕ್ಟ್ ನಡೆದ 42 ತಿಂಗಳ ಒಳಗಾಗಿ ಮೊದಲ ಹಡಗನ್ನು ಪೂರೈಕೆ ಮಾಡಬೇಕು, ಅಂದರೆ 2022 ರ ಅಕ್ಟೋಬರ್ ವೇಳೆಗೆ ಪೂರೈಕೆಯಾಗಬೇಕು. ನಂತರ, GRSE ಯು ವರ್ಷಕ್ಕೆ ಎರಡು ASWSWC ಗಳನ್ನು ಪೂರೈಕೆ ಮಾಡಬೇಕಾಗುತ್ತದೆ, ಹೀಗಾಗಿ ಅದರ ಎಂಟು ಹಡಗುಗಳ ವಿತರಣೆಯು 2026 ರ ಏಪ್ರಿಲ್ ಹೊತ್ತಿಗೆ ಪೂರ್ಣಗೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.