ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು, 70 ವರ್ಷಗಳ ಕಾಂಗ್ರೆಸ್ ಆಡಳಿತ ಮತ್ತು 5 ವರ್ಷಗಳ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಬಗ್ಗೆ ಹೋಲಿಕೆಯನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ 70 ವರ್ಷಗಳಿಗಿಂತ ಮೋದಿಯವರ ಐದು ವರ್ಷ ಉತ್ತಮವಾಗಿತ್ತು ಎಂದು ಅಭಿಪ್ರಾಯಿಸಿದ್ದಾರೆ.
”ಕಾಂಗ್ರೆಸ್ ಪಕ್ಷ ದೇಶವನ್ನು 70 ವರ್ಷಗಳ ಕಾಲ ಆಳಿದೆ. ಆದರೂ ಜನರ ಮತ್ತು ಅವರ ಸಂಸ್ಕೃತಿಯ ಬಗ್ಗೆ ಅದು ಕಾಳಜಿ ವಹಿಸಿಲ್ಲ. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್ ಆಡಳಿತ ಬಂದ ಬಳಿಕ ಅಲ್ಲಿ ಅಭಿವೃದ್ಧಿ ಕಾಣಿಸಿಕೊಂಡಿತು. ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರಪಡಿಸಿತು. ನಾನು ಬಯಸುವುದಿಷ್ಟೇ, ನೀವು 70 ವರ್ಷಗಳ ಕಾಂಗ್ರೆಸ್ ಆಡಳಿತ ಮತ್ತು ಐದು ವರ್ಷಗಳ ಮೋದಿ ಆಡಳಿತವನ್ನು ಹೋಲಿಕೆ ಮಾಡಿ ನೋಡಿ, ಆಗ ನಿಮಗೇ ಅರ್ಥವಾಗುತ್ತದೆ ಯಾರಿಗೆ ಮತ ನೀಡಬೇಕೆಂದು” ಎಂಬುದಾಗಿ ಪ್ರಗ್ಯಾ ಚುನಾವಣಾ ಸಮಾವೇಶದಲ್ಲಿ ಹೇಳಿದ್ದಾರೆ.
”ಮಧ್ಯಪ್ರದೇಶದಲ್ಲಿ 14 ವರ್ಷಗಳ ಬಿಜೆಪಿ ಸರ್ಕಾರ ಉತ್ತಮ ಆಡಳಿತದ ಧ್ಯೇಯದೊಂದಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡಿದೆ. ಆದರೆ 4 ತಿಂಗಳುಗಳ ಕಾಂಗ್ರೆಸ್ ಪಕ್ಷ ಈಗಾಗಲೇ ಭ್ರಷ್ಟಾಚಾರದಲ್ಲಿ ತೊಡಗಿದೆ, ಇತ್ತೀಚಿಗೆ ನಡೆದ ದಾಳಿಯಲ್ಲಿ ಸಿಕ್ಕ ಕಂತೆ ಕಂತೆ ನೋಟುಗಳ ಬ್ಯಾಗುಗಳು ಇದಕ್ಕೆ ಸಾಕ್ಷಿ” ಎಂದಿದ್ದಾರೆ.
”ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರ ಬಗ್ಗೆ ಗೌರವವಿಲ್ಲ. ಆದರೆ ಬಿಜೆಪಿ ಮಹಿಳಾ ಗೌರವದೊಂದಿಗೆ ಅವರ ಭದ್ರತೆ ಮತ್ತು ಸುರಕ್ಷತೆಗೂ ಒತ್ತು ನೀಡಿದೆ” ಎಂದಿದ್ದಾರೆ.
ಬಲಿಷ್ಠ ಸರ್ಕಾರಕ್ಕಾಗಿ ಮತ ಹಾಕಿ ಎಂದು ಕರೆ ನೀಡಿರುವ ಪ್ರಗ್ಯಾ ಸಿಂಗ್ ಅವರು, ದೇಶ ವಿರೋಧಿ ಹೇಳಿಕೆ ನೀಡಿದವರನ್ನು ಅಧಿಕಾರದಿಂದ ಹೊರಗಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.