ನ್ಯೂಯಾರ್ಕ್: ವಿಶ್ವಸಂಸ್ಥೆಯ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ಸ್ ಯೂನಿಯನ್ (ಐಟಿಯು), ವಿಶ್ವ ಬ್ಯಾಂಕ್ ಮತ್ತು ಯುಎನ್ ನ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ವಿಶ್ವದಲ್ಲಿ ಮೊಬೈಲ್ ಫೋನ್ ಗಳನ್ನು ಬಳಕೆ ಮಾಡುವ ಜನರಿಗಿಂತಲೂ ಹೆಚ್ಚಿನ ಪ್ರಮಾಣದ ಮೊಬೈಲ್ ಫೋನ್ ಗಳಿವೆ. ಇದಕ್ಕಾಗಿ ಇಂಟರ್ನೆಟ್ ಮತ್ತು ಅದರ ಸುಲಭ ಲಭ್ಯತೆಗೆ ಧನ್ಯವಾದಗಳನ್ನು ಹೇಳಬೇಕಿದೆ.
ಐಟಿಯು, 2018 ರಲ್ಲಿ 100 ನಿವಾಸಿಗಳಿಗೆ 107 ಮೊಬೈಲ್ ಸೆಲ್ಯುಲಾರ್ ದೂರವಾಣಿ ಚಂದಾದಾರಿಕೆ ಇದೆ ಎಂದು ಅಂದಾಜಿಸಿದೆ, ಇದರ ಅರ್ಥ ಜನರಿಗಿಂತ ಹೆಚ್ಚಾಗಿ ಮೊಬೈಲ್ ಫೋನ್ ಗಳೇ ಇವೆ ಎಂದು.
ವರ್ಷದ ಕೊನೆಯಲ್ಲಿ, ಜಾಗತಿಕ ಜನಸಂಖ್ಯೆಯ ಶೇ.51.2ರಷ್ಟು ಅಥವಾ 3.9 ಶತಕೋಟಿ ಜನರು ಇಂಟರ್ನೆಟ್ ಅನ್ನು ಬಳಸುತ್ತಿದ್ದರೆ, ಜಗತ್ತಿನಲ್ಲಿ ಅಂದಾಜು 5.28 ಶತಕೋಟಿ ಮೊಬೈಲ್ ಬ್ರಾಡ್ಬ್ಯಾಂಡ್ ಚಂದಾದಾರಿಕೆಗಳು ದಾಖಲಾಗಿವೆ.
ಒಂದು ದಶಕದ ಹಿಂದೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ 753 ದಶಲಕ್ಷ ಜನರು ಅಂತರ್ಜಾಲವನ್ನು ಬಳಸುತ್ತಿದ್ದರು, ಈ ಸಂಖ್ಯೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 1,028 ದಶಲಕ್ಷದಷ್ಟು ಇತ್ತು. ಆಶ್ಚರ್ಯವೆಂದರೆ, 2018 ರ ಹೊತ್ತಿಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ 2,868 ಮಿಲಿಯನ್ ಜನರು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ 794 ಮಿಲಿಯನ್ ಜನರು ಇಂಟರ್ನೆಟ್ ಬಳಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.