News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತವನ್ನು ‘ಬಲಿಷ್ಠ ಪ್ರವಾಸೋದ್ಯಮ ಕ್ಷೇತ್ರ’ ಎಂದ FICCI-Yes ಬ್ಯಾಂಕ್ ವರದಿ

ನವದೆಹಲಿ: ಹಲವಾರು ಸುಂದರ ಪ್ರದೇಶಗಳನ್ನು, ವೈಶಿಷ್ಟ್ಯ ಭೌಗೋಳಿಕ ಸೌಂದರ್ಯವನ್ನು, ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಭಾರತ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ FICCI- ಎಸ್ ಬ್ಯಾಂಕ್ ನೂತನ ವರದಿಯಲ್ಲಿ ಭಾರತದ ಪ್ರವಾಸೋದ್ಯಮ ಸ್ಥಾನವನ್ನು ಪಡೆದುಕೊಂಡಿದೆ.

“ಇಂಡಿಯನ್ ಇನ್ಬೌಂಡ್ ಟೂರಿಸಂ-ಅನ್‌ಲಾಕಿಂಗ್ ದಿ ಆಪರ್ಚುನಿಟಿಸ್” ವರದಿಯಲ್ಲಿ ಭಾರತ “ಟೂರಿಸಂ ಪವರ್ ಹೌಸ್” ಮತ್ತು ದಕ್ಷಿಣ ಏಷ್ಯಾದ ಅತಿದೊಡ್ಡ ಮಾರ್ಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಲಿಷ್ಠ ದೇಶಿಯ ಬೇಡಿಕೆ, ಆರ್ಥಿಕ ಪ್ರಗತಿ, ಸ್ಪರ್ಧಾತ್ಮಕ ದರ, ಮೂಲ ಸೌಕರ್ಯ ಅಭಿವೃದ್ಧಿ, ಹೊಸ ತಾಣಗಳ ಸೃಷ್ಟಿ ಇತ್ಯಾದಿಗಳು ಭಾರತದ ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳವಣಿಗೆ ಆಗುವಂತೆ ಮಾಡುತ್ತದೆ.

1. 2029 ರ ವೇಳೆಗೆ ಭಾರತದ ಪ್ರವಾಸೋದ್ಯಮ ವಲಯವು ವಾರ್ಷಿಕ ಶೇಕಡಾ 6.7ರಷ್ಟು ಪ್ರಗತಿಯನ್ನು ಕಂಡು, 35 ಲಕ್ಷ ಕೋಟಿಗೆ ಏರಿಕೆಯಾಗಲಿದೆ.

2. 2018ರಲ್ಲಿ ಪ್ರವಾಸೋದ್ಯಮ ವಲಯವು 2. 67 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆ. 2019 ರ ವೇಳೆಗೆ ಸುಮಾರು 5.3 ಕೋಟಿ ಮಿಲಿಯನ್ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಕಲ್ಪಿಸಲಿದೆ.

3. ವಿದೇಶಿಯರ ಆಗಮನ ವರ್ಷದಿಂದ ವರ್ಷಕ್ಕೆ ಏರಿಕೆಯಾಗಲಿದೆ. 2017ರಲ್ಲಿ ಭಾರತಕ್ಕೆ 1 ಕೋಟಿ ವಿದೇಶಿಯರು ಆಗಮಿಸಿದ್ದರು.

4. ದೇಶೀಯ ಪ್ರವಾಸಿಗರು ಈ ವಲಯದ ಅತೀದೊಡ್ಡ ಶಕ್ತಿಯಾಗಿ ಮುಂದುವರೆಯಲಿದ್ದಾರೆ.

ಇತ್ಯಾದಿ ಅಂಶಗಳನ್ನು ವರದಿ ಉಲ್ಲೇಖ ಮಾಡಿದೆ.

ಅಲ್ಲದೆ, ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಕೇಂದ್ರ ಸರಕಾರ ತೆಗೆದುಕೊಂಡ ಕ್ರಮಗಳಾದಂತಹ ‘ಸ್ವದೇಶ್ ದರ್ಶನ್’ನ ಶೀಘ್ರ ಅನುಷ್ಠಾನ, ‘ಪ್ರಸಾದ್’  (PRASHAD (Pilgrimage Rejuvenation and Spiritual Heritage Augmentation Drive) ಯೋಜನೆ, 166 ದೇಶಗಳ ನಾಗರಿಕರಿಗೆ ಇ-ವೀಸಾ ಮತ್ತು ಮುಂಗಡ ಪ್ರವಾಸೋದ್ಯಮ ಮಾರ್ಗದರ್ಶನಗಳು ಹಾಗೂ ಇನ್ಕ್ರೆಡಿಬಲ್ ಇಂಡಿಯಾ 2.0 ಪ್ರಚಾರ ಮತ್ತು ಇಂಡಿಯ ಟೂರಿಸಂ ಮಾರ್ಟ್­ನ ಪ್ರಚಾರ ಕಾರ್ಯಗಳು  ಈ ಹೆಗ್ಗಳಿಕೆ ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top