ನವದೆಹಲಿ : ಭಾರತವು ಕಳೆದ ವರ್ಷ ವಿಶ್ವದ ನಾಲ್ಕನೇ ಅತಿ ದೊಡ್ಡ ಮಿಲಿಟರಿ ಪಡೆಗಳಿಗಾಗಿ ವೆಚ್ಚ ಮಾಡಿದ ರಾಷ್ಟ್ರ ಆಗಿ ಹೊರಹೊಮ್ಮಿದೆ. ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಹೊಸ ವರದಿಯ ಪ್ರಕಾರ, ಈ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ, ಎರಡನೇ ಸ್ಥಾನದಲ್ಲಿ ಚೀನಾ ಇದೆ, ಮೂರನೇ ಸ್ಥಾನ ಸೌದಿ ಅರೇಬಿಯಾ ಪಡೆದುಕೊಂಡಿದೆ.
2018 ರಲ್ಲಿ ಭಾರತ ಮಿಲಿಟರಿ ಪಡೆಗಳಿಗಾಗಿ ವೆಚ್ಚ ಮಾಡಿದ ವಿಶ್ವದ ನಾಲ್ಕನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಈ ವರದಿ ಹೇಳಿದೆ. 2017ರಲ್ಲಿ ಈ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿತ್ತು. 2018ರಲ್ಲಿ ಫ್ರಾನ್ಸ್ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತವು ತನ್ನ ಮಿಲಿಟರಿ ಸಾಮರ್ಥ್ಯವನ್ನು ಬಲಗೊಳಿಸುವ ನಿಟ್ಟಿನಲ್ಲಿ ಅತೀ ಹೆಚ್ಚು ಹೂಡಿಕೆಗಳನ್ನು ಮಾಡುತ್ತಿದೆ. ಹೊಸ ಯುದ್ಧ ವಿಮಾನಗಳು, ಯುದ್ಧನೌಕೆಗಳು, ಹೆಲಿಕಾಪ್ಟರ್ಗಳು, ಆರ್ಟಿಲರಿ ಗನ್ಸ್ , ಇನ್ಫಂಟ್ರಿ ವೆಪನ್ಸ್ಗಳನ್ನು ಖರೀದಿಸಲು ಭಾರತ ಹತ್ತು ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ.
2018ರಲ್ಲಿ ಚೀನಾವು ತನ್ನ ಮಿಲಿಟರಿ ವೆಚ್ಚವನ್ನು ಶೇಕಡಾ 5 ರಷ್ಟು ಹೆಚ್ಚಳಗೊಳಿಸಿದೆ. ಅಂದರೆ 250 ಬಿಲಿಯನ್ ಡಾಲರ್ ವ್ಯಯ ಮಾಡಿದೆ. ಇದು ಜಾಗತಿಕ ಮಿಲಿಟರಿ ವ್ಯಯದ ಶೇ.14 ರಷ್ಟಾಗಿದೆ.
ಇನ್ನು, ಭಾರತದ ಮಿಲಿಟರಿ ವೆಚ್ಚವು 2018 ರಲ್ಲಿ ಶೇ3.1 ರಷ್ಟು ಏರಿಕೆಯಾಗಿದೆ. ಅಂದರೆ ಭಾರತವು 66.5 ಬಿಲಿಯನ್ ಡಾಲರ್ಗಳನ್ನು ಮಿಲಿಟರಿ ಪಡೆಗಳಿಗಾಗಿ ವ್ಯಯಗೊಳಿಸಿದೆ. ಇದು ಜಾಗತಿಕ ರಕ್ಷಣಾ ವೆಚ್ಚದ ಶೇಕಡಾ 3.7ರಷ್ಟಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.