ಕಠ್ಮಂಡು: ನೇಪಾಳವು ಹಿಮಾಲಯದ ಸ್ವಚ್ಛತೆಗಾಗಿ ಆರಂಭಿಸಿದ ಮಹತ್ವಾಕಾಂಕ್ಷೆಯ ಸ್ವಚ್ಛತಾ ಅಭಿಯಾನದ ಬಳಿಕ, ಏಪ್ರಿಲ್ 14 ರಿಂದ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ನಿಂದ ಬರೋಬ್ಬರಿ 3000 ಕೆಜಿ ಘನತ್ಯಾಜ್ಯವನ್ನು ಸಂಗ್ರಹ ಮಾಡಲಾಗಿದೆ.
45 ದಿನಗಳ ಎವರೆಸ್ಟ್ ಸ್ವಚ್ಛತಾ ಅಭಿಯಾನವು ಏಪ್ರಿಲ್ 14 ರ ನೇಪಾಳಿ ಹೊಸ ವರ್ಷದ ಆರಂಭದಂದು ಆರಂಭಗೊಂಡಿತ್ತು. ಸೊಲುಖುಂಬು ಜಿಲ್ಲೆಯ ಖುಂಭು ಪಸನಗ್ಲಂಮು ಗ್ರಾಮೀಣ ಮಹಾನಗರ ಪಾಲಿಕೆ ಇದರ ನೇತೃತ್ವವನ್ನು ವಹಿಸಿಕೊಂಡಿತ್ತು. ಮೌಂಟ್ ಎವರೆಸ್ಟ್ನಿಂದ ಬರೋಬ್ಬರಿ 10,000 ಕೆಜಿ ತ್ಯಾಜ್ಯ ಸಂಗ್ರಹಿಸುವ ಗುರಿಯನ್ನು ಈ ಅಭಿಯಾನ ಹೊಂದಿತ್ತು.
ಈ ಬಗ್ಗೆ ಮಾಹಿತಿಯನ್ನು ನೀಡಿರುವ ನೇಪಾಳ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ನಿರ್ದೇಶಕ ದಂಡು ರಾಜ್ ಘಿಮಿರಿ ಅವರು, ಇದುವರೆಗೆ ಒಟ್ಟು 3000 ಕೆಜಿ ಘನತ್ಯಾಜ್ಯವನ್ನು ಮೌಂಟ್ ಎವರೆಸ್ಟ್ನಿಂದ ಸಂಗ್ರಹಿಸಲಾಗಿದೆ. ಇದರಲ್ಲಿ 2000 ಕೆಜಿ ಘನತ್ಯಾಜ್ಯವನ್ನು ಓಕಾಲದುಂಗಕ್ಕೆ ಕಳುಹಿಸಿಕೊಡಲಾಗಿದೆ. ಉಳಿದ 1000 ಕೆಜಿ ತ್ಯಾಜ್ಯವನ್ನು ಆರ್ಮಿ ಹೆಲಿಕಾಫ್ಟರ್ ಮೂಲಕ ಕಠ್ಮಂಡುವಿಗೆ ತರಲಾಗಿದ್ದು, ಅದನ್ನು ನಾಶಪಡಿಸಲಾಗುತ್ತದೆ ಎಂದಿದ್ದಾರೆ.
ಈ ಅಭಿಯಾನದ ಅಡಿಯಲ್ಲಿ ಬೇಸ್ ಕ್ಯಾಂಪ್ ಏರಿಯಾದಿಂದ 5000 ಕೆಜಿ ಘನತ್ಯಾಜ್ಯವನ್ನು ಸಂಗ್ರಹ ಮಾಡಲಾಗುತ್ತದೆ, 2000 ಕೆಜಿ ಘನತ್ಯಾಜ್ಯವನ್ನು ಸೌತ್ ಕೋಲ್ ಪ್ರದೇಶದಿಂದ ಮತ್ತು ಕ್ಯಾಂಪ್ II ಹಾಗೂ ಕ್ಯಾಂಪ್ III ರಿಂದ 3000 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.