ನವದೆಹಲಿ: ಜನಧನ್ ಖಾತೆಗಳಲ್ಲಿನ ಠೇವಣಿಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸುಮಾರು 5 ಸಾವಿರ ಕೋಟಿ ರೂಪಾಯಿ ಲಾಭವಾಗುವ ನಿರೀಕ್ಷೆ ಇದೆ ಎಂದು ವರದಿಗಳು ಹೇಳುತ್ತಿವೆ.
ಜನಧನ್ ಖಾತೆಯಲ್ಲಿನ ಠೇವಣಿ ಶೇ.250ರಷ್ಟು ಹೆಚ್ಳವಾಗಿದೆ. 2016ರಲ್ಲಿ ರೂ.36 ಸಾವಿರ ಕೋಟಿ ಇದ್ದ ಠೇವಣಿ, 2019ರಲ್ಲಿ ರೂ.98,400 ಕೋಟಿಗೆ ಏರಿಕೆಯಾಗಿದೆ. ಕೇವಲ ಮೂರು ವರ್ಷಗಳ ಅವಧಿಯಲ್ಲಿ ಇಷ್ಟೊಂದು ಬೆಳವಣಿಗೆಯನ್ನು ಕಂಡಿದೆ.
ಇದೇ ಅವಧಿಯಲ್ಲಿ, ಜನಧನ್ ಫಲಾನುಭವಿಗಳ ಸಂಖ್ಯೆಯೂ ಶೇ.60ರಷ್ಟು ಏರಿಕೆಯಾಗಿದೆ. 22 ಕೋಟಿಯಿಂದ 35 ಕೋಟಿಗೆ ಏರಿಕೆಯಾಗಿದೆ.
ಅಪನಗದೀಕರಣವೂ ಬ್ಯಾಂಕ್ ಖಾತೆಗಳ ಠೇವಣಿಗೆಯನ್ನು ಹೆಚ್ಚಳ ಮಾಡುವಲ್ಲಿ ಸಹಕಾರಿಯಾಗಿದೆ. 2016ರ ಅಕ್ಟೋಬರ್ ಮಧ್ಯಭಾಗದಲ್ಲಿ ರೂ.44,500 ಕೋಟಿ ಇದ್ದ ಠೇವಣಿ 2016ರ ಡಿಸೆಂಬರ್ ಮಧ್ಯಭಾಗದಲ್ಲಿ ರೂ,74 ಸಾವಿರಕ್ಕೆ ಏರಿಕೆಯಾಗಿದೆ. ಅಂದರೆ ಶೇ.66ರಷ್ಟು ಏರಿಕೆಯನ್ನು ಕಂಡಿದೆ.
ಜನಧನ ಖಾತೆಯಲ್ಲಿನ ಠೇವಣಿ ಮೊತ್ತ ಶೀಘ್ರದಲ್ಲೇ 1 ಕೋಟಿ ರೂಪಾಯಿ ಗಡಿಯನ್ನು ದಾಟಲಿದೆ ಎಂಬ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.