ನವದೆಹಲಿ : ಭಾರತೀಯ ನೌಕಾಸೇನೆಯು ವಿಸ್ತರಣೆ ಮತ್ತು ಸಾಮರ್ಥ್ಯದ ವಿಷಯದಲ್ಲಿ ಮತ್ತಷ್ಟು ಬಲಗೊಳ್ಳಲು ಸಜ್ಜಾಗುತ್ತಿದೆ. ತನ್ನ ಕಾರ್ಯಾಚರಣಾ ಸಾಮರ್ಥ್ಯವನ್ನು ಉತ್ತೇಜಿಸುವ ಸಲುವಾಗಿ ಮೆಗಾ ಯೋಜನೆಯನ್ನು ಹಾಕಿಕೊಂಡಿದೆ. ಇದರನ್ವಯ ಯುದ್ಧ ನೌಕೆಗಳನ್ನು, ಜಲಾಂತರ್ಗಾಮಿಗಳನ್ನು ಮತ್ತು ಯುದ್ಧ ವಿಮಾನಗಳನ್ನು ಸೇರ್ಪಡೆಗೊಳಿಸಲು ಮುಂದಾಗಿದೆ.
ಈ ಮೆಗಾ ಯೋಜನೆಯ ಬಗ್ಗೆ ಉನ್ನತ ನೌಕಾ ಕಮಾಂಡರ್ಗಳ ನಡುವೆ ಮೂರು ದಿನಗಳ ಕಾನ್ಫರೆನ್ಸ್ನಲ್ಲಿ ಚರ್ಚೆಗಳು ನಡೆದಿದ್ದು, ನೌಕಾ ಸೇನೆಯು ವಿವಿಧ ರೀತಿಯ 200 ಯುದ್ಧ ನೌಕೆಗಳನ್ನು, 500 ಏರ್ಕ್ರಾಫ್ಟ್ ಯೂನಿಟ್ಗಳನ್ನು ಮತ್ತು 24 ಜಲಾಂತರ್ಗಾಮಿಗಳನ್ನು ಸೇರ್ಪಡೆಗೊಳಿಸುವ ಆಶಯವನ್ನು ವ್ಯಕ್ತಪಡಿಸಿವೆ.
ಕಾನ್ಫರೆನ್ಸ್ ಎಪ್ರಿಲ್ 25 ರಂದು ಅಂತ್ಯಗೊಂಡಿದ್ದು, ಲಾಜಿಸ್ಟಿಕ್ಸ್ ಮತ್ತು ಸಕ್ರಿಯ ಯುದ್ಧ ವಿಷಯಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದೊಡ್ಡ ಮಟ್ಟದ ಡಾಟಾ ಅನಾಲಿಸ್ಟಿಕ್ ಅನ್ನು ಒಳಪಡಿಸುವ ಯೋಜನೆಯ ಬಗ್ಗೆ ಚರ್ಚೆ, ಮಾತುಕತೆಗಳು ನಡೆದಿವೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಅದರಲ್ಲಿ ಭಾಗಿಯಾಗಿದ್ದು ಆರಂಭಿಕ ದಿನದ ಭಾಷಣ ಮಾಡಿದ್ದರು. ಕಾರ್ಯಾಚರಣೆಗೆ ಸದಾ ಸಿದ್ದಗೊಂಡಿರುವ ನೌಕೆಯ ಕಾರ್ಯವನ್ನು ಶ್ಲಾಘಿಸಿದ ಅವರು, ದೇಶೀಕರಣ ಮತ್ತು ಮೇಕ್ ಇನ್ ಇಂಡಿಯಾದತ್ತ ನೌಕೆಯ ಪ್ರಯತ್ನವನ್ನು ಕೊಂಡಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.