ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲೇ 20 ರೂಪಾಯಿ ಮುಖಬೆಲೆಯ, ಮಹಾತ್ಮಾಗಾಂಧಿ ಸರಣಿಯ ಹೊಸ ನೋಟುಗಳನ್ನು ಹೊರತರಲಿದೆ. ಇದರಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿ ಇರಲಿದೆ.
20 ರೂಪಾಯಿಗಳ ಹೊಸ ನೋಟುಗಳು ಹಸಿರು-ಹಳದಿ ಬಣ್ಣದಲ್ಲಿ ಇರಲಿದ್ದು, ಎಲ್ಲೋರಾ ಗುಹೆಯ ಚಿತ್ರವನ್ನು ಹೊಂದುವ ಮೂಲಕ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸಲಿವೆ ಎಂದು ಆರ್ಬಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ 20 ರೂಪಾಯಿ ಮುಖಬೆಲೆಯ ಎಲ್ಲಾ ನೋಟುಗಳು ಇನ್ನು ಮುಂದೆಯೂ ಕಾನೂನಾತ್ಮಕವಾಗಿ ಚಲಾವಣೆಯಲ್ಲಿ ಇರಲಿದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಹೊಸದಾಗಿ ಹೊರ ತರಲಾಗುತ್ತಿರುವ 20 ರೂಪಾಯಿ ಮುಖಬೆಲೆಯ ನೋಟುಗಳ ಹಿಂಭಾಗ ಮತ್ತು ಮುಂಭಾಗದಲ್ಲಿ ಇತರ ವಿನ್ಯಾಸಗಳೂ ಇರಲಿದ್ದು, ನೋಟಿನ ಸಂಪೂರ್ಣ ಬಣ್ಣಗಳೊಂದಿಗೆ ಜಿಯೊಮ್ಯಾಟ್ರಿಕ್ ವಿಧಾನವು ಸಂಯೋಜಿತಗೊಳ್ಳಲಿದೆ. ಈ ನೋಟುಗಳ ಅಳತೆ 63 mm×129 mm ಇರಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.