ಅಮೃತಸರ : ಪಂಜಾಬಿನ ಪವಿತ್ರ ನಗರ ಅಮೃತ ಸರವನ್ನು ಸುಂದರಗೊಳಿಸುವ ಯಾವುದೇ ಅವಕಾಶವನ್ನು ಅಲ್ಲಿನ ಮಹಾನಗರ ಪಾಲಿಕೆ ತಪ್ಪಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಅದು ಮತ್ತೊಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ದಿನಕ್ಕೆ ಸಾವಿರಾರು ಮಂದಿ ಓಡಾಡುವ ಮಂದಿರದ ಸುತ್ತಮುತ್ತ ಬಾಟಲ್ ಕ್ರಶಿಂಗ್ ಮಿಷಿನ್ ಅನ್ನು ಅಳವಡಿಸಿದೆ.
ಬಳಸಿದ ಪ್ಲಾಸ್ಟಿಕ್ ಬಾಟಲ್ಗಳನ್ನು ಜನರು ಈ ಮೆಶಿನಿನಲ್ಲಿ ಹಾಕಿ ಕ್ರಶ್ ಮಾಡಬಹುದು. ಹೀಗೆ ಮಾಡುವುದರಿಂದ ಸ್ಥಳೀಯ ಫುಡ್ ಮತ್ತು ಶಾಪಿಂಗ್ ಸ್ಟೋರ್ಗಳಲ್ಲಿ ರಿಯಾಯಿತಿಯನ್ನೂ ಪಡೆಯಬಹುದಾಗಿದೆ.
ಅಮೃತಸರದ ಪಾರಂಪರಿಕ ಬೀದಿಗಳಲ್ಲಿ 5 ಲಕ್ಷ ಮೌಲ್ಯದ ಸುಮಾರು 10 ಬಾಟಲ್ ಕ್ರಶಿಂಗ್ ಮೆಶಿನ್ಗಳನ್ನು ಅಳವಡಿಸಲಾಗಿದೆ. ಈ ಮೆಶಿನ್ಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ‘ತ್ರೋ ಥ್ರ್ಯಾಶ್, ಸೇವ್ ಕ್ಯಾಶ್’ ಎಂಬ ಘೋಷಣೆಯನ್ನು ಹೊರಡಿಸಲಾಗಿದೆ. ಇದರ ಬಳಕೆ ಮಾಡಿದವರು ಆಹಾರ ಮತ್ತು ಶಾಪಿಂಗ್ ಮಳಿಗೆಗಳಲ್ಲಿ ಶೇಕಡಾ 10 ರಿಂದ 20 ರಷ್ಟು ರಿಯಾಯಿತಿಗಳನ್ನು ಪಡೆಯಲಿದ್ದಾರೆ. ಪ್ರಸಿದ್ಧ ಭರವನ್ ದ ಡಾಬಾ ಮತ್ತು ಪಂಚಾಬಿ ಜಟ್ಟಿ ಸ್ಟೋರ್ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿವೆ.
ಈ ಮೆಷಿನ್ಗಳನ್ನು ಅಳವಡಿಸಿದ ಬಳಿಕ ಅಮೃತಸರದಲ್ಲಿ ಪ್ಲಾಸ್ಟಿಕ್ ಬಾಟಲ್ಗಳ ತ್ಯಾಜ್ಯ ಕಮ್ಮಿಯಾಗಿದೆ. ಪ್ರವಾಸಿಗರು, ಸ್ಥಳೀಯರು ಮಹಾನಗರ ಪಾಲಿಕೆಯ ಈ ಕಾರ್ಯಕ್ರಮವನ್ನು ಕೊಂಡಾಡುತ್ತಿದ್ದಾರೆ. ತಲಾ ಒಂದೊಂದು ಮಿಷನ್ಗಳು ದಿನಕ್ಕೆ 200 ಪ್ಲಾಸ್ಟಿಕ್ ಬಾಟಲ್ಗಳನ್ನು ಪುಡಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಮೆಷಿನ್ ಒಳಗೆ ಪ್ಲಾಸ್ಟಿಕ್ ಬಾಟಲಿ ಹಾಕಿದರೆ ಅದು ಸ್ವಯಂಚಾಲಿತವಾಗಿ ಡಿಸ್ಕೌಂಟ್ ಕೂಪನ್ಗಳನ್ನು ನೀಡುತ್ತದೆ. ಪ್ರಸ್ತುತ ತಲಾ ಒಂದೊಂದು ಮೆಶಿನ್ಗಳು ದಿನಕ್ಕೆ 100 ಬಾಟಲ್ಗಳನ್ನು ಕ್ರಷ್ ಮಾಡುತ್ತದೆ.
ಮುಂಬರುವ ದಿನಗಳಲ್ಲಿ ಇದರ ಬಳಕೆ ಇನ್ನಷ್ಟು ವೇಗ ಪಡೆಯುವ ನಿರೀಕ್ಷೆ ಇದೆ. ಡಿಸ್ಕೌಂಟ್ ನೀಡುವ ಫುಡ್ ಮತ್ತು ಆಹಾರ ಮಳಿಗೆಗಳ ಸಂಖ್ಯೆಯನ್ನು ಮುಂಬರುವ ದಿನಗಳಲ್ಲಿ ಹೆಚ್ಚಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.