ನವದೆಹಲಿ: ಬ್ಯಾಂಕಾಂಗ್ನಲ್ಲಿ ನಡೆದ ಏಷಿಯನ್ ಚಾಂಪಿಯನ್ಶಿಪ್ನಲ್ಲಿ ಭಾರತ 13 ಪದಕಗಳನ್ನು ಪಡೆದುಕೊಂಡಿದೆ. ಎರಡು ಚಿನ್ನದ ಪದಕ, 4 ಬೆಳ್ಳಿಯ ಪದಕ ಮತ್ತು 7 ಕಂಚಿನ ಪದಕಗಳನ್ನು ಭಾರತೀಯ ಬಾಕ್ಸರ್ಗಳು ಪಡೆದುಕೊಂಡಿದ್ದಾರೆ.
ಗುರುವಾರ ನಡೆದ ಕೊನೆಯ ಕ್ರೀಡಾಕೂಟದಲ್ಲಿ ಭಾರತ ಒಂದು ಬಂಗಾರ ಮತ್ತು ಎರಡುಬೆಳ್ಳಿ ಪದಕಗಳನ್ನು ಗಳಿಸಿದೆ.
ಭಾರತೀಯ ಬಾಕ್ಸರ್ ಅಮಿತ್ ಪಂಘಲ್ ಅವರು, ಈ ವರ್ಷದ ಎರಡನೇ ಬಂಗಾರದ ಪದಕವನ್ನು ಪಡೆದುಕೊಂಡಿದ್ದು, ಈ ಮೂಲಕ 52 ಕೆಜಿ ವಿಭಾಗದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಪಂಘಾಲ್ ಅವರು, ಕೊರಿಯ ಆಟಗಾರ ಕಿಂಗ್ ಇನ್ ಕ್ಯೂ ಕೊರಿಯಾ ಅವರನ್ನು ಕೊನೆಯ ಪಂದ್ಯದಲ್ಲಿ ಪರಾಭವಗೊಳಿಸಿದರು.
ರಾಷ್ಟ್ರೀಯ ಚಾಂಪಿಯನ್ ದೀಪಕ್ ಸಿಂಗ್ ಮತ್ತು ಕೆವಿಂದರ್ ಸಿಂಗ್ ಬಿಷ್ಟ್ ಅವರು, 56 ಕೆಜಿ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಜಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.