News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಣಕಾಸು ವರ್ಷವನ್ನು ಜನವರಿ-ಡಿಸೆಂಬರ್­ನಲ್ಲಿ ಆರಂಭಿಸಲು ಆದಾಯ ತೆರಿಗೆ ಇಲಾಖೆ ಚಿಂತನೆ

 

ನವದೆಹಲಿ: ಹಣಕಾಸು ವರ್ಷವನ್ನು ಕ್ಯಾಲೆಂಡರ್ ವರ್ಷದೊಂದಿಗೇ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಚಿಂತನೆಗಳು ಆರಂಭಗೊಂಡಿದೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಆದಾಯ ತೆರಿಗೆ ಇಲಾಖೆಯು ಜನವರಿ 1 ರಿಂದ ಡಿಸೆಂಬರ್ 31 ಅನ್ನು ಹಣಕಾಸು ವರ್ಷವನ್ನಾಗಿಸುವ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಆದಾಯ ಇಲಾಖೆಯು, ಜುಲೈನಲ್ಲಿ ಮಂಡನೆಗೊಳ್ಳಲಿರುವ ಬಜೆಟ್­ನಲ್ಲಿ ಹಣಕಾಸು ವರ್ಷವನ್ನು ಬದಲಾಯಿಸುವ ಬಗೆಗಿನ ಪ್ರಸ್ತಾಪಕ್ಕೆ ಬೆಂಬಲವನ್ನು ನೀಡಲಿದೆ.

ಪ್ರಸ್ತುತ ಹಣಕಾಸು ವರ್ಷ, ಎಪ್ರಿಲ್ 1 ರಿಂದ ಮಾರ್ಚ್ 31 ರ ವರೆಗೆ ಇದೆ. ಕ್ಯಾಲೆಂಡರ್ ವರ್ಷ ಜನವರಿ 1 ರಿಂದ ಡಿಸೆಂಬರ್ 31.

ಒಂದು ವೇಳೆ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ, ಅದು ಹಣಕಾಸು ವರ್ಷವನ್ನು ಎಪ್ರಿಲ್-ಮಾರ್ಚ್­ನಿಂದ ಜನವರಿ-ಡಿಸೆಂಬರ್­ಗೆ ಬದಲಾಯಿಸಲಿದೆ. ಆದರೆ, ಆರಂಭದಲ್ಲಿ ಇದಕ್ಕೆ ಸವಾಲುಗಳು ಎದುರಾಗಬಹುದು ಮತ್ತು ಬದಲಾವಣೆಗೂ ಮುನ್ನ ಸಾಕಷ್ಟು ಸಮಯಾವಕಾಶವನ್ನು ನೀಡುವ ಅಗತ್ಯವಿದೆ ಎಂದು ವರದಿಯ ಮೂಲಗಳು ಹೇಳಿವೆ.

‘ಒಂದು ಬದಲಾವಣೆ ಜಾರಿಯಾದರೆ, 150 ವರ್ಷಗಳ ಬ್ರಿಟಿಷರ ಪದ್ಧತಿ ಅಂತ್ಯವಾಗಲಿದೆ. ಅದೇ ರೀತಿ, ಆದಾಯ ತೆರಿಗೆ ಇಲಾಖೆ ಕೂಡ ಹಣಕಾಸು ವರ್ಷ ಮತ್ತು ಕ್ಯಾಲೆಂಡರ್ ವರ್ಷವನ್ನು ಒಂದೇ  ಆಗಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಿದೆ” ಎಂದಿದೆ.

2017ರಲ್ಲಿ ನರೇಂದ್ರ ಮೋದಿ ಸರ್ಕಾರ ಈ ಐಡಿಯಾವನ್ನು ಮುಂದಿಟ್ಟಿತ್ತು. ಇದಕ್ಕೆ ನೀತಿ ಆಯೋಗದ ಸಹಮತವೂ ವ್ಯಕ್ತವಾಗಿತ್ತು. ಈ ಬಗೆಗಿನ ಸಾಧ್ಯತೆ ಬಾಧ್ಯತೆಗಳನ್ನು ತಿಳಿಯಲು ಸರ್ಕಾರ ಸಮಿತಿಯನ್ನೂ ರಚನೆ ಮಾಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top