ವಿಶಾಖಪಟ್ಟಣ: ಆಂಧ್ರಪ್ರದೇಶದಲ್ಲಿ ಗುರುವಾರ 35 ಮಹಿಳಾ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ‘ಸ್ತ್ರೀ ಶಕ್ತಿ’ ಪಡೆಯನ್ನು ರಚನೆ ಮಾಡಲಾಗಿದೆ. ಮಹಿಳಾ ಸುರಕ್ಷತೆಗಾಗಿ ಈ ಪಡೆ ಕಾರ್ಯಾಚರಿಸಲಿದೆ.
35 ಸದಸ್ಯರ ಈ ತಂಡದಲ್ಲಿ, ಎಎಸ್ಐಗಳು, ಹೆಡ್ ಕಾನ್ಸ್ಸ್ಟೇಬಲ್, ಪೊಲೀಸ್ ಕಾನ್ಸ್ಸ್ಟೇಬಲ್, ಹೋಂ ಗಾರ್ಡ್ ಇರಲಿದ್ದಾರೆ. ಈ ತಂಡಕ್ಕೆ 25 ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳನ್ನು ಒದಗಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆಂಧ್ರಪ್ರದೇಶ ಡಿಜಿಪಿ ಎಪಿ ಠಾಕೂರ್ ಅವರು, ”ಮಹಿಳಾ ರಕ್ಷಣೆಯ ಉದ್ದೇಶದೊಂದಿಗೆ ಈ ತಂಡವನ್ನು ರಚನೆ ಮಾಡಲಾಗಿದೆ. ಈ ತಂಡಕ್ಕೆ 25 ವಾನಹಗಳನ್ನು ಒದಗಿಸಿದ್ದೇವೆ. ಇದರಲ್ಲಿ 5 ನಾಲ್ಕು ಚಕ್ರ ವಾಹನಗಳಾಗಿವೆ, ಉಳಿದವು ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಗಳಾಗಿವೆ. ಮಹಿಳಾ ದೌರ್ಜನ್ಯ ಸಂಬಂಧಿಸಿದ ದೂರನ್ನು ಈ ತಂಡಕ್ಕೆ ನೀಡಿದರೆ, ಅದು ಕ್ರಮ ಜರುಗಿಸುತ್ತದೆ. ವಾಹನ ಚಾಲಕರಿಂದ ಹಿಡಿದು ಸಿಬ್ಬಂದಿಗಳವರೆಗೆ ಈ ತಂಡದ ಎಲ್ಲರೂ ಮಹಿಳೆಯರೇ ಆಗಿದ್ದಾರೆ” ಎಂದಿದ್ದಾರೆ.
”ವಿಶಾಖಪಟ್ಟಣದಲ್ಲಿ ಅಪಾರ ಪ್ರಮಾಣದ ಶೈಕ್ಷಣಿಕ ಸಂಸ್ಥೆಗಳು, ಕಾರ್ಯಕ್ಷೇತ್ರಗಳಿವೆ. ಇಲ್ಲಿ ಅಪಾರ ಪ್ರಮಾಣ ಹೆಣ್ಣು ಮಕ್ಕಳು ದುಡಿಯುತ್ತಿದ್ದಾರೆ. ಅವರಿಗೆ ಸುರಕ್ಷತೆಯನ್ನು ಒದಗಿಸುವ ಸಲುವಾಗಿ ತಂಡ ಶ್ರಮಿಸಲಿದೆ” ಎಂದಿದ್ದಾರೆ.
ಈ ತಂಡದ ಮಹಿಳೆಯರಿಗೆ, ಡ್ರೈವಿಂಗ್, ಸ್ವಿಮ್ಮಿಂಗ್, ಸಂವನ ಕೌಶಲ್ಯ, ಸ್ವಯಂರಕ್ಷಣೆಯ ತರಬೇತಿಗಳನ್ನು ನೀಡಲಾಗಿದೆ.
‘ಸ್ತ್ರೀ ಶಕ್ತಿ’ ಪೊಲೀಸ್ ತಂಡದ ಸಿಬ್ಬಂದಿ ನೀಲಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಅನ್ನು ಸಮವಸ್ತ್ರವಾಗಿ ಧರಿಸಲಿದ್ದಾರೆ. ಜನನಿಬಿಡ ಸ್ಥಳಗಳಲ್ಲಿ, ಜಂಕ್ಷನ್ಗಳಲ್ಲಿ ಇವರು ನಿಯೋಜಿತರಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.