ನವದೆಹಲಿ: ವಿಶ್ವಬ್ಯಾಂಕ್ ಸಮೂಹದ ಇಂಟರ್ ನ್ಯಾಷನಲ್ ಫಿನಾನ್ಸ್ ಕಾರ್ಪೋರೇಶನ್ (ಐಎಫ್ಸಿ) ಮತ್ತು ಹೀರೋ ಗ್ರೂಪ್ ರಾಜಸ್ಥಾನದಲ್ಲಿ ಸೋಲಾರ್ ಎನರ್ಜಿ ಯೋಜನೆಗೆ ಬರೋಬ್ಬರಿ 2 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ, ಈ ಬಗ್ಗೆ ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ಯೋಜನೆಯಲ್ಲಿ ಐಎಫ್ಸಿಯು 43.3 ಮಿಲಿಯನ್ ಅನ್ನು ಹೂಡಿಕೆ ಮಾಡಲಿದೆ. ಉಳಿದವನ್ನು ಕ್ಲೀನ್ ಸೋಲಾರ್ ಪವರ್ (ಜೋಧಪುರ) ಫಂಡ್ ಮಾಡಲಿದೆ. ಹೀರೋ ಫ್ಯೂಚರ್ ಎನರ್ಜೈಸ್ ಗ್ಲೋಬಲ್, ಕೈಗಾರಿಕಾ ದಿಗ್ಗಜ ಹೀರೋ ಗ್ರೂಪ್ನ ಕ್ಲೀನ್ ಎನರ್ಜಿ ಅಂಗಸಂಸ್ಥೆಯಾಗಿದೆ.
ಈ ಪ್ರಾಜೆಕ್ಟ್, ರಾಜಸ್ಥಾನದ ಭದ್ಲಾದಲ್ಲಿ 250 ಮೆಗಾವ್ಯಾಟ್ ಸೋಲಾರ್ ಫಾರ್ಮ್ನ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ. ಈಗಾಗಲೇ ಈ ಸಂಸ್ಥೆ, ಸೋಲಾರ್ ಎನರ್ಜಿ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ನೊಂದಿಗೆ 25 ವರ್ಷಗಳ ಅವಧಿಗೆ ಒಪ್ಪಂದವನ್ನು ಮಾಡಿಕೊಂಡಿದೆ.
ಹೀರೋ ಫ್ಯೂಚರ್ ಎನರ್ಜೈಸ್ ದೇಶದ ಅತೀದೊಡ್ಡ ನವೀಕರಿಸಬಹುದಾದ ಶಕ್ತಿಯ ಅಭಿವೃದ್ಧಿದಾರನಾಗಿದ್ದು, 10 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ, ಇದು ವಿಂಡ್ ಮತ್ತು ಸೋಲಾರ್ ಅನ್ನು ಸಮತೋಲನದಲ್ಲಿ ಮಿಕ್ಸ್ ಮಾಡಿ 1.2 ಗಿಗಾವ್ಯಾಟ್ ಪ್ಲಾಂಟ್ ಅನ್ನು ಸ್ಥಾಪನೆ ಮಾಡಿದೆ.
1956ರಲ್ಲಿ ವಿಶ್ವಬ್ಯಾಂಕ್ ಸಮೂಹವು ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯನ್ನು ಪ್ರತಿಪಾದಿಸುವ ಸಲುವಾಗಿ ಐಎಫ್ಸಿ ಅನ್ನು ಖಾಸಗಿ ವಲಯ ಅಂಗವಾಗಿ ಸ್ಥಾಪನೆ ಮಾಡಿತು. ಇದು ಬಡತನವನ್ನು ಕುಗ್ಗಿಸಲು ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಲಾಭ ಮತ್ತು ವಾಣಿಜ್ಯ ಯೋಜನೆಗಳಲ್ಲಿ ಹೂಡಿಕೆಯನ್ನು ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.