ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಮಿಲಿಟರಿ ಪೊಲೀಸ್ ಹುದ್ದೆಗೆ ಮಹಿಳೆಯರ ನೇಮಕಾತಿ ಮಾಡುವ ಬಗೆಗಿನ ಜಾಹೀರಾತುಗಳನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿದೆ. ‘ಪರ್ಸನಲ್ ಬಿಲೋ ಆಫಿಸರ್ ರ್ಯಾಂಕ್’ ವಿಭಾಗದಲ್ಲಿ ಸೇನಾ ಪಡೆಗೆ ಮಹಿಳೆಯರ ನಿಯೋಜನೆ ಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದ ಮೂರು ತಿಂಗಳುಗಳ ತರುವಾಯ ಸೇನೆ ಈ ಜಾಹೀರಾತನ್ನು ಪ್ರಕಟಿಸಿದೆ.
‘ಯೋಧರ ಸಾಮಾನ್ಯ ಕರ್ತವ್ಯ(ಮಹಿಳಾ ಮಿಲಿಟರಿ ಪೊಲೀಸ್)ಗೆ ಅಪ್ಲಿಕೇಶನ್ ವಿಂಡೋ ಅನ್ನು ಇಂದಿನಿಂದ ಆರಂಭಿಸಲಾಗಿದ್ದು, ಜೂನ್ 8 ರಂದು ಇದು ಕ್ಲೋಸ್ ಆಗಲಿದೆ ಎಂದು ಜಾಹೀರಾತಿನಲ್ಲಿ ಸೇನೆ ತಿಳಿಸಿದೆ.
ಮಿಲಿಟರಿ ಪೊಲೀಸ್ನಲ್ಲಿ ಮಹಿಳೆಯರ ನಿಯೋಜನೆ ಒಂದು ಐತಿಹಾಸಿಕ ನಿರ್ಧಾರವಾಗಿದೆ, ಇದೇ ಮೊದಲ ಬಾರಿಗೆ ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ನ ಪರ್ಸನಲ್ ಬಿಲೋ ಆಫೀಸರ್ ರ್ಯಾಂಕ್ನಲ್ಲಿ ಮಹಿಳೆಯರನ್ನು ನಿಯೋಜನೆಗೊಳಿಸಲಾಗುತ್ತಿದೆ. ಮಹಿಳಾ ಸಬಲೀಕರಣ ಮತ್ತು ಶಸ್ತ್ರಾಸ್ತ್ರ ಪಡೆಗಳಲ್ಲಿ ಮಹಿಳಾ ಪ್ರತಿನಿಧಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೆಗೆದುಕೊಂಡು ಅತ್ಯಂತ ಮಹತ್ವದ ಹೆಜ್ಜೆ ಇದೆಂದು ಬಣ್ಣಿಸಲಾಗಿದೆ.
ಮಿಲಿಟರಿ ಪೋಲಿಸ್ ಕಾರ್ಪ್ಸ್, ಉತ್ತಮ ಆದೇಶ ಪಾಲಮೆ ಮತ್ತು ಶಿಸ್ತುಗಳನ್ನು ರಕ್ಷಿಸಲು ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳಿಂದಾಗುವ ಉಲ್ಲಂಘನೆಯನ್ನು ತಡೆಗಟ್ಟುವ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತದೆ ಎಂದು ಸೇನೆ ತನ್ನ ವೆಬ್ಸೈಟ್ನಲ್ಲಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.