ನವದೆಹಲಿ: ಭಾರತೀಯ ಉಕ್ಕು ಮತ್ತು ಶಕ್ತಿ ದಿಗ್ಗಜ ಸಂಸ್ಥೆಯಾದ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (JSPL), ಮೊತ್ತ ಮೊದಲ ರೈಲ್ ಹಳಿ ಆರ್ಡರ್ 1 ಲಕ್ಷ ಟನ್ ಡೆಲಿವರಿಯನ್ನು ಪೂರ್ಣಗೊಳಿಸಿದೆ. ಭಾರತೀಯ ರೈಲ್ವೇಯು ಈ ಸಂಸ್ಥೆಗೆ ಆರ್ಡರ್ ಅನ್ನು ನೀಡಿತ್ತು.
ಉದ್ದದ ರೈಲ್ ಹಳಿ ಪಟ್ಟಿಗಳನ್ನು ಪೂರೈಕೆ ಮಾಡುವ ಸಲುವಾಗಿ ರೂ. 2,500 ಕೋಟಿ ರೂಪಾಯಿಯ ಜಾಗತಿಕ ಟೆಂಡರ್ನ ಶೇ.20ರಷ್ಟನ್ನು 2018 ರ ಜುಲೈನಲ್ಲಿ JSPL ಕಂಪನಿಗೆ ಭಾರತೀಯ ರೈಲ್ವೇಯು ನೀಡಿತ್ತು.
ಈ ಆರ್ಡರ್ನ ಅನ್ವಯ, JSPL ಸಂಸ್ಥೆಯು ಒಂದು ವರ್ಷದೊಳಗೆ ಭಾರತೀಯ ರೈಲ್ವೇಗೆ 97,400 ಟನ್ಗಳಷ್ಟು ರೈಲು ಹಳಿ ಪಟ್ಟಿಗಳನ್ನು ಪೂರೈಕೆ ಮಾಡಬೇಕಾಗಿತ್ತು.
JSPL ಸಂಸ್ಥೆಯು 2018ರ ಆಗಸ್ಟ್ ತಿಂಗಳಿನಿಂದ ತನ್ನ ರಾಯಘಡ್ ಪ್ಲಾಂಟಿನಿಂದ ರೈಲ್ನ ಮೊದಲ ಕನ್ಝೈನ್ಮೆಂಟ್ ಅನ್ನು ರವಾನೆ ಮಾಡಲು ಪ್ರಾರಂಭಿಸಿತು ಮತ್ತು 2019ರ ಎಪ್ರಿಲ್ ತಿಂಗಳಲ್ಲಿ ಅವಧಿಗಿಂತ ನಾಲ್ಕು ತಿಂಗಳು ಮುಂಚಿತವಾಗಿಯೇ ಸಂಪೂರ್ಣ ರೈಲ್ ಹಳಿಗಳನ್ನು ಅದು ಪೂರೈಕೆ ಮಾಡಿದೆ.
ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನಲೆಯಲ್ಲಿ, ಭಾರತೀಯ ರೈಲ್ವೇಯು 4.87 ಲಕ್ಷ ಮೆಟ್ರಿಕ್ ಟನ್ ರೈಲ್ ಹಳಿ ಪೂರೈಕೆಗಾಗಿ ಜಾಗತಿಕ ಟೆಂಡರ್ ಅನ್ನು ಕರೆದಿತ್ತು.
Proud to announce that we have completed the delivery of our first order from #IndianRailways to supply 97,400 tonnes of rails 4 months ahead of schedule. With this, we believe we have taken a giant step forward & now it’s time to go further & faster. https://t.co/a8UXaGebvF pic.twitter.com/kbTgmvMXkr
— JINDAL STEEL & POWER (@JSPLCorporate) April 24, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.