ಟೋಕಿಯೋ: ಭಾರತೀಯ ಮೂಲದ ಜಪಾನ್ ಪ್ರಜೆಯೊಬ್ಬರು ಟೋಕಿಯೋದ ಎಡೊಗವ ವಾರ್ಡ್ ಅಸೆಂಬ್ಲಿಗೆ ಆಯ್ಕೆಯಾಗುವ ಮೂಲಕ, ಜಪಾನಿನಲ್ಲಿ ಚುನಾವಣೆ ಗೆದ್ದ ಮೊದಲ ಭಾರತೀಯ ಸಂಜಾತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರಾಣಿಕ್ ಯೋಗೇಂದ್ರ ಈ ಸಾಧನೆಯನ್ನು ಮಾಡಿದವರು.
ಗೆದ್ದ ಬಳಿಕ ಮಾತನಾಡಿದ ಯೋಗೇಂದ್ರ, ‘ನಾನು ಜಪಾನ್ ಮತ್ತು ವಿದೇಶಿಗರ ನಡುವಣ ಅಂತರವನ್ನು ಕುಗ್ಗಿಸಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ. ಅವರಿಗೆ ಕಾನ್ಸ್ಸ್ಟಿಟ್ಯೂಶನಲ್ ಡೆಮಾಕ್ರಿಟಿಕ್ ಪಾರ್ಟಿ ಆಫ್ ಜಪಾನ್ ಪಕ್ಷ ಬೆಂಬಲವನ್ನು ನೀಡಿದೆ.
ಯೋಗೇಂದ್ರ ಅವರು 1997ರಲ್ಲಿ ಭಾರತದ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗ ಜಪಾನಿಗೆ ತೆರಳಿದ್ದು, ಎರಡು ವರ್ಷಗಳ ಬಳಿಕ ಭಾರತಕ್ಕೆ ವಾಪಾಸ್ ಆಗಮಿಸಿದ್ದರು. ಬಳಿಕ 2001ರಲ್ಲಿ ಮತ್ತೆ ಜಪಾನಿಗೆ ತೆರಳಿ ಅಲ್ಲಿ ಎಂಜಿನಿಯರ್ ಆಗಿ ದುಡಿದರು. ಅಲ್ಲಿ ಅವರು ಬ್ಯಾಂಕುಗಳಲ್ಲಿ ದುಡಿದರು, ವಿವಿಧ ಕಂಪನಿಗಳಲ್ಲಿ ದುಡಿದರು. ಎಡೊಗವ ವಾರ್ಡ್ನಲ್ಲಿ ಅವರು 2005ರಿಂದ ನೆಲೆಸಿದ್ದಾರೆ.
ಯೋಗೇಂದ್ರ ಅವರು ಚುನಾವಣೆಯಲ್ಲಿ, ತಟಸ್ಥ ಜಪಾನಿಗನಾಗಿ 6,477 ಮತಗಳನ್ನು ಪಡೆದುಕೊಂಡರು, ಎಪ್ರಿಲ್ 21ರಂದು ಚುನಾವಣೆಯಲ್ಲಿ ಚಲಾವಣೆಯಾದ 226,561 ಅರ್ಹ ಮತಗಳ ಪೈಕಿ ಅವರಿಗೆ ಹೆಚ್ಚು ಮತಗಳು ಬಿದ್ದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.