ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು(IIM -B)ನ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದೆ. ಇದರ ಎಂಟರ್ಪ್ರೈಸ್ ಮ್ಯಾನೇಜ್ಮೆಂಟ್(PGPEM)ಗ ಈಗ ಜಗತ್ತಿನಲ್ಲೇ 61ನೇ ರ್ಯಾಂಕಿಂಗ್ ಅನ್ನು ಪಡೆದುಕೊಂಡಿದೆ. ಕ್ವಾಕುರೆಲ್ಲಿ ಸೈಮಂಡ್ಸ್ (QS) ಎಕ್ಸಿಕ್ಯೂಟಿವ್ MBA ಶ್ರೇಯಾಂಕಗಳು 2019 ಏಷಿಯಾ ಪೆಸಿಫಿಕ್ (APAC) ರೀಜನ್ನಲ್ಲಿ ಈ ರ್ಯಾಂಕಿಂಗ್ ಅನ್ನು ಪಡೆದುಕೊಂಡಿದೆ.
ಈ ಪ್ರತಿಷ್ಠಿತ ಸಂಸ್ಥೆ, ಕ್ವಾಕುರೆಲ್ಲಿ ಸೈಮಂಡ್ಸ್ (QS) ಬಿಡುಗಡೆಗೊಳಿಸಿರುವ ಜಾಗತಿಕ ಶ್ರೇಯಾಂಕದಲ್ಲಿ ಆರನೇಯ ಸ್ಥಾನವನ್ನು ಪಡೆದುಕೊಂಡಿದೆ. ನ್ಯಾಷನಲ್ ಇನ್ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್ ಎಫ್) ಅಡಿಯಲ್ಲಿ IIM -B ದೇಶದ ಅತ್ಯುನ್ನತ ಶ್ರೇಯಾಂಕಿತ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಆಗಿದೆ.
ವಿಶ್ವದಾದ್ಯಂತದ 100 ಟಾಪ್ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಂಸ್ಥೆ IIM -B ಆಗಿದೆ. ಏಷ್ಯಾ ಪೆಸಿಫಿಕ್ ಭಾಗದಲ್ಲಿ ಇದು ಸತತ ಎರಡನೇ ಬಾರಿಗೆ 16ನೇ ಸ್ಥಾನವನ್ನು ಪಡೆದುಕೊಂಡಿದೆ.
QS ರ್ಯಾಂಕಿಂಗ್ ವಿಶ್ವದ ಉನ್ನತ ವಿಶ್ವವಿದ್ಯಾಲಯಗಳನ್ನು ವೈಯಕ್ತಿಕ ವಿಷಯದ ವಿಭಾಗದಲ್ಲೂ ಗುರುತಿಸುತ್ತದೆ, ಈ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ವಿಷಯವನ್ನು ಆಧರಿಸಿ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.