ನವದೆಹಲಿ: ಫೋರ್ಬ್ಸ್ ಪ್ರಕಾರ, ಆರ್ಥಿಕ ಹಿನ್ನಡೆ ಮತ್ತು ದುರ್ಬಲ ಸ್ಟಾಕ್ ಮಾರ್ಕೆಟ್ ಕಾರಣಗಳಿಂದಾಗಿ 2018ರಿಂದ ಬಿಲಿಯನೇರ್ಗಳ ಪಟ್ಟಿಯಿಂದ 55 ಮಂದಿ ಹೊರ ನಡೆದಿದ್ದಾರೆ. ಪೋರ್ಬ್ಸ್ನ 2001ರ ಪಟ್ಟಿಯಲ್ಲಿ ವಿಶ್ವದ 564 ಬಿಲಿಯನೇರ್ಗಳು ಸ್ಥಾನ ಪಡೆದುಕೊಂಡಿದ್ದಾರೆ. ಬಳಿಕದ ವರ್ಷದಲ್ಲಿ ಪಟ್ಟಿಯಲ್ಲಿ ಇಳಿಕೆಯಾಗುತ್ತಾ ಬಂದಿದೆ, 2002ರಲ್ಲಿ 497 ಮಂದಿ, 2013ರಲ್ಲಿ 475 ಮಂದಿ ಸ್ಥಾನ ಪಡೆದುಕೊಂಡಿದ್ದರು. ಬಳಿಕದ ವರ್ಷಗಳಲ್ಲಿ ಪಟ್ಟಿಯಲ್ಲಿ ಏರಿಕೆಯಾಯಿತು. 2019ರಲ್ಲಿ 2,153 ಮಂದಿ ಸ್ಥಾನ ಪಡೆದುಕೊಂಡಿದ್ದಾರೆ.
ಫೋರ್ಬ್ಸ್ ಪ್ರಕಾರ, 2018ರಿಂದ 55 ಮಂದಿ ಪಟ್ಟಿಯಿಂದ ಹೊರ ನಡೆದಿದ್ದಾರೆ. ಆರ್ಥಿಕ ಹಿನ್ನಡೆ ಮತ್ತು ದುರ್ಬಲ ಸ್ಟಾಕ್ ಮಾರ್ಕೆಟ್ ಇದಕ್ಕೆ ಕಾರಣ ಎನ್ನಲಾಗಿದೆ. ಏಷ್ಯಾ ಪೆಸಿಫಿಕ್ ಭಾಗದ ಬಹುತೇಕರು ಸುಮಾರು 60 ಬಿಲಿಯನೇರ್ಗಳು ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಚೀನಾದಲ್ಲಿ ಬಿಲಿಯನೇರ್ಗಳ ಪಟ್ಟಿಯಿಂದ 49 ಮಂದಿ ಹೊರ ನಡೆದಿದ್ದಾರೆ.
ಈ ವರ್ಷ ಬಿಲಿಯನೇರ್ಗಳ ಸಂಖ್ಯೆಯನ್ನು ಏರಿಕೆ ಮಾಡಿಕೊಂಡ ದೇಶಗಳೆಂದರೆ ಅಮೆರಿಕಾ ಮತ್ತು ಬ್ರೆಝಿಲ್ ಮಾತ್ರ.
ಬೇರೆ ದೇಶಗಳಿಗಿಂತ ಅತೀಹೆಚ್ಚು ಅಂದರೆ 607 ಬಿಲಿಯನೇರ್ಗಳನ್ನು ಅಮೆರಿಕಾ ಹೊಂದಿದೆ ಎಂದು ಫೋರ್ಬ್ಸ್ ವರದಿ ಹೇಳಿದೆ. ಚೀನಾದಲ್ಲಿ 324 ಬಿಲಿಯನೇರ್ಗಳಿದ್ದಾರೆ. 114 ಬಿಲಿಯನೇರ್ಗಳನ್ನು ಹೊಂದಿರುವ ಜರ್ಮನಿಯು ಮೂರನೇ ಸ್ಥಾನದಲ್ಲಿದೆ. 106 ಬಿಲಿಯನೇರ್ಗಳೊಂದಿಗೆ ಭಾರತವು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಜಗತ್ತಿನಾದ್ಯಂತದ 20 ಶ್ರೀಮಂತ ವ್ಯಕ್ತಿಗಳ ಪೈಕಿ 14 ಮಂದಿ ಅಮೆರಿಕಾದವರಾಗಿದ್ದಾರೆ. ಜೆಫ್ ಬೆಜೊಸ್ ಅವರು ನಂ.1 ಸ್ಥಾನದಲ್ಲಿದ್ದಾರೆ. 2019 ರಲ್ಲಿ ಬಿಲಿಯನೇರ್ ಪಟ್ಟಿಯಲ್ಲಿ ಇಬ್ಬರು ಮಹಿಳೆಯರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.