ನವದೆಹಲಿ: ಇಂಟರ್ಪೋಲ್ ಎಂದು ಕರೆಯಲ್ಪಡುವ ಇಂಟರ್ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಝೇಶನ್, ದೇಶಭ್ರಷ್ಟ ಇಸ್ಲಾಂ ಬೋಧಕ ಜಾಕೀರ್ ನಾಯ್ಕ್ ವಿರುದ್ಧ ‘ರೆಡ್ ನೋಟಿಸ್’ ಜಾರಿಗೊಳಿಸುವ ಬಗೆಗಿನ ಭಾರತದ ಮನವಿಯನ್ನು ಪರಿಶೀಲಿಸುವುದಾಗಿ ತಿಳಿಸಿದೆ.
‘ರೆಡ್ ನೋಟಿಸ್’ ಒಂದು ಮನವಿಯಾಗಿದ್ದು, ಇಂಟರ್ಪೋಲ್ ಸದಸ್ಯರಾದ ಸುಮಾರು 194 ರಾಷ್ಟ್ರಗಳಿಗೆ ಈ ನೋಟಿಸ್ ಹೋಗುತ್ತದೆ. ಇದರಿಂದ ಜಾಕೀರ್ ಯಾವ ದೇಶದಲ್ಲಿ ಇದ್ದಾನೆ ಎಂಬುದನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ ಮತ್ತು ಅಲ್ಲಿ ಆತನನ್ನು ಕಸ್ಟಡಿಗೂ ತೆಗೆದುಕೊಳ್ಳಬಹುದಾಗಿದೆ.
ನಾಯ್ಕ್ ವಿರುದ್ಧ ಹಣಕಾಸು ವಂಚನೆ, ದ್ವೇಷದ ಭಾಷಣ ಮತ್ತು ಮತ್ತಿತರ ಅಪರಾಧಗಳ ಆರೋಪವಿದೆ. 2016ರ ಧಾಕಾ ಬಾಂಬಾ ಸ್ಪೋಟ ನಡೆಸಿದ ಉಗ್ರರು, ನಾವು ನಾಯ್ಕ್ ಭಾಷಣಗಳಿಂದ ಪ್ರೇರಿತರಾಗಿ ಈ ಕೃತ್ಯಗಳನ್ನು ನಡೆಸಿದ್ದೇವೆ ಎಂದಿದ್ದರು. ಆ ಬಳಿಕ ನಾಯ್ಕ್ ಭಾರತದಿಂದ ಓಡಿ ಹೋಗಿದ್ದಾನೆ.
ರಾಷ್ಟ್ರೀಯ ತನಿಖಾ ಸಂಸ್ಥೆಯು, ನಾಯ್ಕ್ನನ್ನು ಅಂತಾರಾಷ್ಟ್ರೀಯ ಮಟ್ಟದಿಂದ ಗಡಿಪಾರು ಮಾಡುವುದಕ್ಕ ಮನವಿ ಮಾಡಿಕೊಂಡಿದೆ. ಇದರಿಂದ ಆತನನ್ನು ಭಾರತಕ್ಕೆ ತಂದು ವಿಚಾರಣೆಗೊಳಪಡಿಸುವುದು ಸುಲಭವಾಗಲಿದೆ.
ಮೂಲಗಳ ಪ್ರಕಾರ, ಆತ ಈಗ ಮಲೇಷ್ಯಾದಲ್ಲಿದ್ದಾನೆ. ಅಲ್ಲಿ ಆತನಿಗೆ ಖಾಯಂ ಮನೆಯೂ ಇದೆ. ಮಲೇಷ್ಯಾ ಸರ್ಕಾರಕ್ಕೆ ಭಾರತ, ಆತನನ್ನು ಗಡಿಪಾರು ಮಾಡುವಂತೆ ಕೇಳಿಕೊಂಡಿದೆ. ಆದರೆ ಇದುವರೆಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಮಲೇಷ್ಯಾಗೆ ಆತನಿಂದ ಯಾವುದೇ ತೊಂದರೆ ಆಗದ ಹೊರತು ನಾವು ಆತನನ್ನು ಶಿಕ್ಷಿಸುವುದಿಲ್ಲ ಎಂದು ಅಲ್ಲಿನ ಪ್ರಧಾನಿ ಹೇಳಿಕೆ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.