ನವದೆಹಲಿ: ನಕಲಿ, ಕಳಪೆ ಗುಣಮಟ್ಟ ಮತ್ತು ಅವಧಿ ಮುಗಿದ ಔಷಧಗಳ ಪೂರೈಕೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು, ಪೋಲಿಯೊ ಲಸಿಕೆ ಮತ್ತು ಐರನ್ ಟ್ಯಾಬ್ಲೆಟ್ಗಳ ಮೇಲೆ ಹಿಂದಿ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಲ್ಲಿ ಲೇಬಲ್ ಅಂಟಿಸಲು ನಿರ್ಧರಿಸಿದೆ. ಭಾರತದಲ್ಲಿ ಜನಿಸಿದ ಬಹುತೇಕ ಎಲ್ಲಾ ಮಕ್ಕಳಿಗೂ ಪೋಲಿಯೋ ಡ್ರಾಪ್ಸ್ ಮತ್ತು ಐರನ್ ಟ್ಯಾಬ್ಲೆಟ್ಗಳನ್ನು ನೀಡಲಾಗುತ್ತದೆ. ಹೀಗಾಗಿ ಇವುಗಳ ಗುಣಮಟ್ಟವನ್ನು ಹೆಚ್ಚಿಸಲು ಕಳೆದ ಎರಡು ವರ್ಷಗಳಿಂದ ಸರ್ಕಾರ ಪ್ರಯತ್ನಿಸುತ್ತಲೇ ಇದೆ.
ಈ ಎರಡು ಔಷಧಿಗಳ ಮೇಲೆ ಇಂಗ್ಲೀಷ್ ಜೊತೆಗೆ ಇತರ ಪ್ರಾದೇಶಿಕ ಭಾಷೆಯಲ್ಲೂ ಸೂಚನೆಗಳನ್ನು ಬರೆದಿರಬೇಕು ಎಂದು ಡ್ರಗ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್, ಔಷಧಿ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಎಲ್ಲಾ ಸರ್ಕಾರಿ ಏಜೆನ್ಸಿಗಳಿಗೂ ಇತ್ತೀಚಿಗೆ ಶಿಫಾರಸ್ಸನ್ನು ಮಾಡಿತ್ತು.
ಸರ್ಕಾರದ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ವಿತರಿಸಲಾಗುವ ಪೋಲಿಯೋ ಮತ್ತು ಐರಾನ್ ಬ್ಯಾಬ್ಲೆಟ್ ಔಷಧಿಯ ಹೆಸರು, ಬಳಸಬಹುದಾದ ಅವಧಿಯ ದಿನಾಂಕ ಇತ್ಯಾದಿಗಳನ್ನು ಹಿಂದಿ ಅಥವಾ ಇತರ ಪ್ರಾದೇಶಿಕ ಭಾಷೆಗಳಲ್ಲಿ ಬರೆದಿರಬೇಕು ಎಂದು ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಈ ಔಷಧಿ ಸೇರಿದಂತೆ ಬಹುತೇಕ ಎಲ್ಲಾ ಔಷಧಿಗಳಲ್ಲೂ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಲೇಬಲ್ಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.