ನವದೆಹಲಿ: ಚೀನಾದ ಕ್ಸಿಯಾನ್ನಲ್ಲಿ ಜರುಗುತ್ತಿರುವ ಏಷ್ಯನ್ ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಮಂಗಳವಾರ ಭಾರತದ ಒಂದು ಬಂಗಾರದ ಪದಕ, ಒಂದು ಬೆಳ್ಳಿಯ ಪದಕ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ.
ವಿಶ್ವ ನಂಬರ್ 1 ಆಟಗಾರ ಬಜರಂಗ್ ಪೂನಿಯಾ ಅವರು 10 ಪಾಯಿಂಟ್ಗಳನ್ನು ಪಡೆದುಕೊಂಡು ಬಂಗಾರದ ಪದಕವನ್ನು ಜಯಿಸಿದ್ದಾರೆ, ಈ ಮೂಲಕ ಏಷ್ಯನ್ ಚಾಂಪಿಯನ್ಶಿಪ್ ಕಿರೀಟವನ್ನು ಮತ್ತೆ ಮುಡಿಗೇರಿಸಿಕೊಳ್ಳಲು ಭರ್ಜರಿ ಪ್ರಯತ್ನ ನಡೆಸಿದ್ದಾರೆ. ಅವರು 65 ಕೆಜಿ ವಿಭಾಗದಲ್ಲಿ ಕಜಕೀಸ್ಥಾನದ ಸಯತ್ಬೆಕ್ ಪಕಸ್ಸೊವ ಅವರನ್ನು 12-7 ಅಂತರದಿಂದ ಸೋಲಿಸಿದ್ದಾರೆ.
ಚಾಂಪಿಯನ್ಶಿಪ್ನಲ್ಲಿ ಇದು ಬಜರಂಗ್ ಪೂನಿಯಾ ಅವರ ಎರಡನೇ ಚಿನ್ನದ ಪದಕವಾಗಿದ್ದು, 2017ರಲ್ಲೂ ಅವರು ಬಂಗಾರ ಜಯಿಸಿದ್ದರು.
ಮತ್ತೋರ್ವ ಭಾರತೀಯ ಕ್ರೀಡಾಪಟು ಪ್ರವೀಣ್ ರಾಣಾ ಅವರು 79ಕೆಜಿ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ, 97 ಕೆಜಿ ವಿಭಾಗದಲ್ಲಿ ಸತ್ಯವ್ರತ್ ಕಡಿಯನ್ ಅವರು ಕಂಚಿನ ಪದಕವನ್ನು ಜಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.