ನವದೆಹಲಿ: ಯುದ್ಧ ಪೀಡಿತ ಅಫ್ಘಾನಿಸ್ಥಾನಕ್ಕೆ ಭಾರತ ಸದಾ ಸಹಾಯಹಸ್ತವನ್ನು ಚಾಚುತ್ತಲೇ ಬಂದಿದೆ. ಈ ಬಾರಿಯೂ ಅಫ್ಘಾನ್ ನ್ಯಾಷನಲ್ ಆರ್ಮಿಯ ವಿಕಲಚೇತನ ಯೋಧರಿಗಾಗಿ ಭಾರತ 100 ಮೋಟಾರ್ ಚಾಲಿತ ವ್ಹೀಲ್ಚೇರ್ಗಳನ್ನು ಕಳುಹಿಸಿಕೊಟ್ಟಿದೆ.
ಅಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಪಡುತ್ತಿರುವ ಭಾರತ, ಆ ದೇಶದ ಅಭಿವೃದ್ಧಿ ಮತ್ತು ಮಿಲಿಟರಿಗಾಗಿ ನೂರಾರು ಮಿಲಿಯನ್ ಡಾಲರ್ ಅನುದಾನಗಳನ್ನು ನೀಡುತ್ತಿದೆ. ಇದುವರೆಗೆ ಅಲ್ಲಿನ ಸುಮಾರು 4,880 ಮಿಲಿಟರಿ ಪಡೆಗಳಿಗೆ ಭಾರತ ತರಬೇತಿಯನ್ನೂ ನೀಡಿದೆ. ಅಲ್ಲಿನ ಪ್ರಜೆಗಳಿಗೆ ವೃತ್ತಿಪರ ಮತ್ತು ಶೈಕ್ಷಣಿಕ ತರಬೇತಿಯನ್ನೂ ನೀಡಿದೆ.
ಭಾರತದ ಕಾರ್ಯಕ್ರಮದಡಿ ಅಫ್ಘಾನಿಸ್ಥಾನದ ವೈದ್ಯರುಗಳು ಮತ್ತು ಮೆಡಿಕಲ್ ಸಿಬ್ಬಂದಿಗಳು ತರಬೇತಿಯನ್ನೂ ಪಡೆದುಕೊಂಡಿದ್ದಾರೆ.
ಅಫ್ಘಾನಿಸ್ಥಾನದ ಸೇನಾ ಪಡೆಗಳು ತಾಲಿಬಾನ್ ಉಗ್ರರರೊಂದಿಗೆ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗೆ ಎರಡು ದಶಕಗಳಿಂದ ಹೋರಾಡುತ್ತಲೇ ಇದೆ. ಈ ಹೋರಾಟದಲ್ಲಿ ಹಲವಾರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಕೈ ಕಾಲು ಕಳೆದುಕೊಂಡು ವಿಕಲಚೇತನರಾಗಿದ್ದಾರೆ. ಇಂತಹ ಯೋಧರಿಗಾಗಿ ಭಾರತ ಈಗ 100 ಮೋಟಾರ್ ವ್ಹೀಲ್ ಚೇರ್ ಅನ್ನು ಕಳುಹಿಸಿಕೊಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.