ನವದೆಹಲಿ: ಚೀನಾದ ನೌಕಾಪಡೆಯ 70 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಭಾರತದ 2 ನೌಕಾ ಹಡಗುಗಳು ಅಲ್ಲಿಗೆ ತೆರಳಿವೆ. ಚೀನಾದ ಕಿಂಗ್ಡಾವ್ನಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ಪ್ಲೀಟ್ ರಿವ್ಯೂನಲ್ಲಿ ಇವು ಭಾಗವಹಿಸಲಿವೆ.
ಸ್ಥಳೀಯವಾಗಿ ನಿರ್ಮಾಣಗೊಂಡಿರುವ ಸ್ಟೀಲ್ತ್ ಗೈಡೆಡ್ ಡಿಸ್ಟ್ರಾಯರ್ ಐಎನ್ಎಸ್ ಕೊಲ್ಕತ್ತಾ ಮತ್ತು ಪ್ಲೀಟ್ ಸಪೋರ್ಟ್ ಶಿಪ್ ಶಕ್ತಿ ಎಪ್ರಿಲ್ 21 ರಂದು ಚೀನಾ ಕರಾವಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ.
ಈ ಎರಡು ಯುದ್ಧನೌಕೆಗಳು ಎಪ್ರಿಲ್ 23ರಂದು ಜರುಗಲಿರುವ ಮರಿಟೈಮ್ ಪರೇಡ್ನಲ್ಲಿ ಭಾಗವಹಿಸಲಿವೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಪರೇಡ್ ಅನ್ನು ಪರಿಶೀಲಿಸಲಿದ್ದಾರೆ.
ವರದಿಗಳ ಪ್ರಕಾರ, ಚೀನಾದ ಆತ್ಮೀಯ ಸ್ನೇಹಿತ ಪಾಕಿಸ್ಥಾನವು ತನ್ನ ಯುದ್ಧನೌಕೆಗಳನ್ನು ಈ ಹೈ ಪ್ರೊಫೈಲ್ ಮರಿಟೈಮ್ ಪರೇಡ್ಗೆ ಕಳುಹಿಸಿಕೊಡಲು ವಿಫಲವಾಗಿದೆ. ಕನಿಷ್ಠ ಎರಡು ಪಾಕಿಸ್ತಾನಿ ಹಡಗುಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ಯಾವುದೇ ಅಧಿಕೃತ ಘೋಷಣೆ ಮಾಡದೆಯೇ ಪಾಕಿಸ್ತಾನ ತನ್ನ ಹಡಗುಗಳನ್ನು ಕಳುಹಿಸುವುದರಿಂದ ಹಿಂದೆ ಸರಿದಿದೆ. ವರದಿಗಳ ಪ್ರಕಾರ, ಅರಬ್ಬಿ ಸಮುದ್ರದಲ್ಲಿ ಭಾರತವು ಅಪಾರ ಪ್ರಮಾಣದ ನೌಕಾಪಡೆಗಳನ್ನು ನಿಯೋಜನೆಗೊಳಿಸುವುದರಿಂದ ಪಾಕಿಸ್ಥಾನವು ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಭಾರತದ ದೇಶಿಯ ನಿರ್ಮಾಣ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಸಲುವಾಗಿ ಭಾರತೀಯ ನೌಕಪಡೆಯ ಎರಡು ಯುದ್ಧನೌಕೆಗಳು ಚೀನಾದಲ್ಲಿನ ಮರಿಟೈಮ್ ಪೆರೇಡ್ನಲ್ಲಿ ಭಾಗಿಯಾಗುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.