ನವದೆಹಲಿ: ಫ್ರಾನ್ಸ್ನೊಂದಿಗಿನ ಮ್ಯೂಚುವಲ್ ಲಾಜಿಸ್ಟಿಕ್ಸ್ ಸಪೋರ್ಟ್ ಅಗ್ರಿಮೆಂಟ್ (MLSA) ನಿಂದ ಹೆಚ್ಚಿನ ಸಹಾಯವನ್ನು ಪಡೆದುಕೊಳ್ಳಲು ಭಾರತೀಯ ನೌಕೆ ಮುಂದಾಗಿದ್ದು, ದಿಜಿಬೌಟಿಯಲ್ಲಿನ ಫ್ರೆಂಚ್ ನೌಕಾ ನೆಲೆ ಅನ್ನು ಮರು ಇಂಧನ ಹಾಕುವಿಕೆ ಮತ್ತು ಕಾರ್ಯಾಚರಣಾ ಕಾರ್ಯಗಳಿಗೆ ಲಭ್ಯವಾಗುವಂತೆ ಮಾಡಲು ಅನುಮತಿಯನ್ನು ಕೇಳಿದೆ.
”ಮರುಇಂಧನ ಹಾಕುವಿಕೆ ಕಾರ್ಯಕ್ಕೆ ಈಗಾಗಲೇ ರಿಯೂನಿಯನ್ ಐಸ್ಲ್ಯಾಂಡಿನಲ್ಲಿನ ಫ್ರೆಂಚ್ ಬೇಸ್ ಅನ್ನು ಬಳಕೆ ಮಾಡುತ್ತಿದ್ದೇವೆ. ದಿಜಿಬೌಟಿಯಲ್ಲಿನ ಅವರ ಬೇಸ್ ಅನ್ನು ಬಳಕೆ ಮಾಡುವ ನಿಟ್ಟಿನಲ್ಲೂ ಮಾತುಕತೆಗಳು ನಡೆಯುತ್ತಿವೆ” ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಹಿಂದೂ ಮಹಾಸಾಗರ ಮತ್ತು ಇಂಡೋ ಪೆಸಿಫಿಕ್ ಭಾಗದಲ್ಲಿನ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಭಾರತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದೆ, ಇದಕ್ಕಾಗಿ ಅಮೆರಿಕಾದೊಂದಿಗೆ ಲಾಜಿಸ್ಟಿಕ್ಸ್ ಎಕ್ಸ್ಚೇಂಜ್ ಮೆಮೊರಾಂಡಂ ಆಫ್ ಅಗ್ರಿಮೆಂಟ್ (LEMOA) ಅನ್ನು ಮಾಡಿಕೊಂಡಿದೆ, ಇನ್ನೂ ಇತರ ಐದು ದೇಶಗಳೊಂದಿಗೆ ಇದೇ ರೀತಿಯ ಒಪ್ಪಂದ ಮಾಡಿಕೊಳ್ಳುವತ್ತ ಚಿತ್ತ ಹರಿಸಿದೆ.
ಫ್ರಾನ್ಸ್ ದೇಶದೊಂದಿಗೆ ಭಾರತವು ಶೀಘ್ರದಲ್ಲೇ ”ಗರುಡಾ” ಎನ್ನುವ ಜಂಟಿ ನೌಕಾ ಸಮರಾಭ್ಯಾಸವನ್ನು ಮಾಡಲಿದೆ. ಮುಂದಿನ ತಿಂಗಳು ಸಮರಾಭ್ಯಾಸ ಜರುಗಲಿದೆ. ಉಭಯ ದೇಶಗಳ ಏರ್ಕ್ರಾಫ್ಟ್ ಕ್ಯಾರಿಯರ್ಗಳು ಇದರಲ್ಲಿ ಭಾಗಿಯಾಗುತ್ತಿದ್ದು, ಇದು ನೌಕೆಯ ವಿದೇಶಿ ಸಹಕಾರ ನೀತಿಗೆ ಹೆಚ್ಚಿನ ಉತ್ತೇಜನವನ್ನು ತಂದುಕೊಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.