ಮುಂಬಯಿ: 2019ರಲ್ಲಿ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಂಡ ಟೆಲಿಕಾಂ ಆಪರೇಟರ್ಗಳೆಂದರೆ ರಿಲಾಯನ್ಸ್ ಜಿಯೋ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮಾತ್ರ. ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ(ಟ್ರಾಯ್) ಗುರುವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಈ ಅಂಶ ತಿಳಿದುಬಂದಿದೆ.
ಫೆಬ್ರವರಿ ತಿಂಗಳಲ್ಲಿ ಜಿಯೋದ ಗ್ರಾಹಕರ ಸಂಖ್ಯೆ 29.72 ಕೋಟಿ, ಜನವರಿ ತಿಂಗಳಲ್ಲಿ 77.93 ಲಕ್ಷ ಬಳಕೆದಾರರು ಜಿಯೋಗೆ ಸೇರ್ಪಡೆಗೊಂಡಿದ್ದಾರೆ. ಸಂಕಷ್ಟದಲ್ಲಿರುವ ಬಿಎಸ್ಎನ್ಎಲ್ ಈ ವರ್ಷ 8.99 ಲಕ್ಷ ಗ್ರಾಹಕರನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಅದರ ಗ್ರಾಹಕರ ಸಂಖ್ಯೆ 11.62 ಕೋಟಿಗೆ ತಲುಪಿದೆ.
ದೇಶದ ವೈಯರ್ ಲೆಸ್ ಗ್ರಾಹಕರ ಒಟ್ಟು ಸಂಖ್ಯೆ 118.36 ಕೋಟಿಗೆ ಬಂದು ನಿಂತಿದೆ. ಈ ವರ್ಷ ಸುಮಾರು 17.07 ಲಕ್ಷ ಗ್ರಾಹಕರು ಸೇರ್ಪಡೆಗೊಂಡಿದ್ದಾರೆ.
ವಡಾಫೋನ್ ಈ ವರ್ಷ 57.87 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇದೀಗ ಅದರ ಗ್ರಾಹಕರ ಸಂಖ್ಯೆ 40.93 ಕೋಟಿಗಳಿಗೆ ಇಳಿದಿದೆ. ಭಾರ್ತಿ ಏರ್ಟೆಲ್ 99,896 ಗ್ರಾಹಕರನ್ನು ಕಳೆದುಕೊಂಡಿದೆ. ಇದೀಗ ಅದರ ಗ್ರಾಹಕರ ಸಂಖ್ಯೆ 34.03 ಕೋಟಿ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.